ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ - ಶಾಸಕ ಆರಗ ಜ್ಞಾನೇಂದ್ರ ಸಂತಾಪ
ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ, ಜೆಡಿಎಸ್ ಪಕ್ಷದ ಹಿರಿಯ ತಾಯಿ ಚೆನ್ನಮ್ಮನವರ ನಿಧನದ ಸುದ್ದಿ ಅತ್ಯಂತ ದುಃಖಕರ. ದೇವೇಗೌಡರ ಸಾರ್ವಜನಿಕ ಬದುಕಿನ ಪಯಣದಲ್ಲಿ ಅವರ ಬೆಂಬಲ ಅಮೂಲ್ಯವಾಗಿತ್ತು. ಅವರ ಸರಳತೆ, ತಾಳ್ಮೆ ಮತ್ತು ಕುಟುಂಬದ ಮೇಲಿನ ಬದ್ಧತೆ ಸದಾ ಸ್ಮರಣೀಯ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಅವರ ಕುಟುಂಬವರ್ಗ ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಂತಾಪ ಸೂಚಿಸಿದ್ದಾರೆ..
Tags:
ಆರಗ ಜ್ಞಾನೇಂದ್ರ