ಪಟ್ಟಣ ಪಂಚಾಯತ್ ನಿಂದ ಜೆಸಿ ಆಸ್ಪತ್ರೆಗೆ ಅಗತ್ಯ ವೈದ್ಯಕೀಯ ಉಪಕರಣಗಳ ಹಸ್ತಾಂತರ
ತೀರ್ಥಹಳ್ಳಿ : 15ನೇ ಹಣಕಾಸು ಆಯೋಗದ ಆರೋಗ್ಯ ಅನುದಾನದ ಅಡಿ ಡಾರ್ಟ್ ಎಂಟರ್ಪ್ರೈಸಸ್ ಬೆಂಗಳೂರು ಸಂಸ್ಥೆಯು ಅಗತ್ಯ ವೈದ್ಯಕೀಯ ಉಪಕರಣಗಳು ಮತ್ತು ಆರೋಗ್ಯ ಮೂಲ ಸೌಕರ್ಯ ಸಾಮಾಗ್ರಿಗಳನ್ನು ತೀರ್ಥಹಳ್ಳಿಯ ಪಟ್ಟಣ ಪಂಚಾಯತ್ ಮೂಲಕ ಹಸ್ತಾಂತರಿಸಲಾಯಿತು..
ಜೆಸಿ ಆಸ್ಪತ್ರೆಗೆ ಬೇಕಾಗುವಂತಹ ಯುಪಿಎಸ್, ಒಪಿಡಿ ಮತ್ತು ಇತರೆ ನೊಂದಣಿ ಪುಸ್ತಕಗಳ ಮುದ್ರಣ, ಜನ ಆರೋಗ್ಯ ಸಮಿತಿ ಕೈಪಿಡಿ, ಮಹಿಳಾ ಆರೋಗ್ಯ ಸಮಿತಿ ಕೈಪಿಡಿ, ಪ್ರಥಮ ಚಿಕಿತ್ಸಾಪೆಟ್ಟಿಗೆ, ಖಾಲಿ ಕುರ್ಚಿ, ಔಷಧ ಸಂಗ್ರಹಣೆಗಾಗಿ ರ್ಯಾಕ್, ಸೇರಿ 2,64,000 ರೂ ಮೌಲ್ಯದ ಒಟ್ಟು 16 ವಿವಿಧ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.. ಈ ಎಲ್ಲಾ ಸಾಮಾಗ್ರಿಗಳನ್ನು ಆಸ್ಪತ್ರೆಯಲ್ಲಿ ಉಪಯೋಗಿಸಿಕೊಳ್ಳಲೇಬೇಕು ಎಂದು ತಿಳಿಸಲಾಯಿತು..
ಈ ವೇಳೆ ತಾಲೂಕು ವೈದ್ಯಾಧಿಕಾರಿ ಅರವಿಂದ್ ಮಾತನಾಡಿ ತುಂಬಾ ಅವಶ್ಯಕವಾಗಿರುವ ಸಾಮಗ್ರಿಗಳನ್ನು ಪಟ್ಟಣ ಪಂಚಾಯತ್ ನಿಂದ ನೀಡಿದ್ದಾರೆ. ಬಹುಮುಖ್ಯವಾಗಿ ಯುಪಿಎಸ್ ಅವಶ್ಯಕತೆ ಇತ್ತು. ಉಪಾಧ್ಯಕ್ಷರಾದ ಗೀತಾ ರಮೇಶ್ ಬಳಿ ನಾವು ತಿಳಿಸಿದ್ದೆವು. ತಕ್ಷಣವೇ ಬೆಂಗಳೂರಿನಿಂದ ಯುಪಿಎಸ್ ಜೊತೆಗೆ ಇತರ ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದೆ. ಇದರ ಸದುಪಯೋಗವನ್ನು ಮಾಡಿಕೊಳ್ಳುತ್ತೇವೆ ಎಂದರು..
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗರಾಜ್, ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಮಂಜುಳಾ ನಾಗೇಂದ್ರ, ಸುಶೀಲ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಜ್ಯೋತಿ ಮೋಹನ್, ಸಂದೇಶ್ ಜವಳಿ ಸೇರಿ ಹಲವರು ಉಪಸ್ಥಿತರಿದ್ದರು..
Tags:
ಜಯಚಾಮರಾಜೇಂದ್ರ ಆಸ್ಪತ್ರೆ