ರಿಯಾಯತಿ ದರದಲ್ಲಿ ದಂಡ ಪಾವತಿಗೆ ಅವಕಾಶ , ತೀರ್ಥಹಳ್ಳಿ ಪೊಲೀಸರಿಂದ ಮಾಹಿತಿ
ತೀರ್ಥಹಳ್ಳಿ : : ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದವರಿಗೆ ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಈ ಅವಕಾಶ ಜೂ . 21 ರಿಂದ ಜು.10 ರವರೆಗೆ ಇದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ..
ತೀರ್ಥಹಳ್ಳಿ ಪಟ್ಟಣದಲ್ಲಿ ಹಲವಾರು ದಿನಗಳಿಂದ ಆನ್ಲೈನ್ ದಂಡಗಳನ್ನ ಹಾಕಲಾಗುತ್ತಿದ್ದು ವಾಹನ ಸವಾರರು ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್, ಅತೀ ವೇಗದ ಚಾಲನೆ, ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಹೀಗೆ ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ಫೋಟೋ ಮೂಲಕ ಸೆರೆಹಿಡಿದು ಆನ್ಲೈನ್ ದಂಡವನ್ನು ವಿಧಿಸಲಾಗುತ್ತಿದೆ.. ಈಗಾಗಲೇ ಹಲವಾರು ಮಂದಿಗೆ ಆನ್ಲೈನ್ ನ ಮೂಲಕ ದಂಡ ವಿಧಿಸಲಾಗಿದ್ದು ಅಂತವರಿಗೆ ಶೇ.50ರ ರಿಯಾಯಿತಿ ದರದಲ್ಲಿ ದಂಡಪಾವತಿಸಲು ಅವಕಾಶ ನೀಡಲಾಗಿದೆ..
Tags:
ತೀರ್ಥಹಳ್ಳಿ ಸುದ್ದಿ