ಪತ್ರೊಡೆ ಎಲೆ ಕುಯ್ಯಲು ಹೋಗಿದ್ದ ಯುವಕ ವಿದ್ಯುತ್ ಶಾಕ್ ಹೊಡೆದು ಸಾವು ! Current Shock

ಪತ್ರೊಡೆ ಎಲೆ ಕುಯ್ಯಲು ಹೋಗಿದ್ದ ಯುವಕ ವಿದ್ಯುತ್ ಶಾಕ್ ಹೊಡೆದು ಸಾವು !

ತೀರ್ಥಹಳ್ಳಿ :  ಪತ್ರೊಡೆ ಎಲೆ ಕೀಳಲು ಮರ ಏರಿದ್ದ ಯುವಕನೋರ್ವ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ದುರ್ಘಟನೆ ಲಕ್ಕುಂದ ಸಮೀಪ ಸಂಭವಿಸಿದೆ.

ಮೃತ ಯುವಕನನ್ನು ಅಭಿಷೇಕ್ ಶೆಟ್ಟಿ ಎಂದು ಗುರುತಿಸಲಾಗಿದ್ದು ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿಯಾಗಿದ್ದಾರೆ. ಮೃತ ಯುವಕನ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಬಂಧು-ಬಳಗದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಪತ್ರೊಡೆ ಎಲೆ ಕೀಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಗೊಂಡು ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Previous Post Next Post