ಆರ್ಥಿಕವಾಗಿ ಮಹಿಳೆಯರು ಸಬಲರಾದರೆ ದೇಶ ಸಬಲ ಆಗುತ್ತದೆ - ಆರಗ ಜ್ಞಾನೇಂದ್ರ Araga Jnanendra

ಆರ್ಥಿಕವಾಗಿ ಮಹಿಳೆಯರು ಸಬಲರಾದರೆ ದೇಶ ಸಬಲ ಆಗುತ್ತದೆ - ಆರಗ ಜ್ಞಾನೇಂದ್ರ 

ತೀರ್ಥಹಳ್ಳಿ :  ಇವತ್ತು ನಿಮ್ಮೆಲ್ಲರಿಗೂ ಉಚಿತವಾಗಿ ಹೊಲಿಗೆ ಯಂತ್ರ ನೀಡಲಾಗುತ್ತಿದೆ. ದೇವರಾಜು ಅರಸು ಅವರು ಕನ್ನಡ ನಾಡನ್ನು ಅಭಿವೃದ್ಧಿ ಮಾಡಿರುವ ಮುಖ್ಯಮಂತ್ರಿ ಎಂಬುದನ್ನು ಮರೆಯಬಾರದು. ಈ ಕಾರಣದಿಂದ ಅವರ ಹೆಸರಲ್ಲಿ ನಿಗಮ ಸ್ಥಾಪಿಸಿ ಹಿಂದುಳಿದ ಮಹಿಳೆಯರಿಗೆ ಈ ರೀತಿ ಯೋಜನೆ ನೀಡುತ್ತಿರುವುದು ಒಳ್ಳೆಯದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು 

ಗುರುವಾರ ಗ್ರಾಮೀಣಾಭಿವೃದ್ಧಿ ಭವನದಲ್ಲಿ ನಡೆದ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಹಿಂದುಳಿದ ವರ್ಗಗಳ ಮಹಿಳಾ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಸುಮಾರು 80 ಕ್ಕೂ ಹೆಚ್ಚು ಮಂದಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು..

ಡಿ ದೇವರಾಜು ಅರಸು ಅವರು ಗೇಣಿ ರೈತರರಿಗೆ ಭೂಮಿ ನೀಡಿದ ಮಹಾನ್ ನಾಯಕ ಅವರು,, ಮೊನ್ನೆ ಸಿದ್ದರಾಮಯ್ಯ ಅವರು ದೇವರಾಜು ಅರಸು ಅವರಿಗಿಂತ ಹೆಚ್ಚು ದಿನ ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೇಳುತ್ತಿದ್ದರು ಆದರೆ ದೇವರಾಜು ಅರಸು ಅವರ ರೀತಿ ಅಭಿವೃದ್ಧಿ ಮಾಡಿದ ಮುಖ್ಯಮಂತ್ರಿ ಯಾರು ಇಲ್ಲ ಎಂದು ಹೇಳಿದರು.. ಇದನ್ನು ನಿಮ್ಮೆಲ್ಲರಿಗೂ ಉಚಿತವಾಗಿ ಕೊಡಲಾಗುತ್ತಿದೆ. ಇದನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕು 
ಮನೆಗೆ ತೆಗೆದುಕೊಂಡು ಹೋಗಿ ಬದಿಗೆ ಹಾಕಿದರೆ ಅಥವಾ ಮಾರಾಟ ಮಾಡಿದರೆ ನಾವು ಅನರ್ಹರನ್ನು ಆಯ್ಕೆ ಮಾಡಿದಂತೆ ಆಗುತ್ತದೆ. ಇದರಿಂದ ಅನುಕೂಲ ಆಗಿ ನಿಮ್ಮ ಕುಟುಂಬಕ್ಕೆ ಉಪಕಾರ ಆದರೆ ನಮಗೂ ಸಂತೋಷ ಆಗುತ್ತದೆ. ಆರ್ಥಿಕವಾಗಿ ಮಹಿಳೆಯರು ಸಬಲರಾದರೆ ದೇಶ ಸಬಲಆಗುತ್ತದೆ. ಮನೆಯಲ್ಲಿ ಗಂಡಸರ ಕೈಯಲ್ಲಿ ಹಣ ಇರುತ್ತದೋ ಇಲ್ಲವೋ ಆದರೆ ಮಹಿಳೆಯರ ಕೈಯಲ್ಲಿ ಹಣ ಇರಬೇಕು.. ಅದಕ್ಕಾಗಿ ಇಂತಹ ಅನೇಕ ಯೋಜನೆಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಸರಿಯಾಗಿ ಪಡೆದುಕೊಳ್ಳಿ ಎಂದು ತಿಳಿಸಿದರು..

ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಗೀತಾ ರಮೇಶ್ ಮಾತನಾಡಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ.. ಈಗ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡುತ್ತಿರುವುದನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಲಿ ಎಂದು ತಿಳಿಸಿದರು..
Previous Post Next Post