ಕಟ್ಟೆಹಕ್ಕಲು ಸಮೀಪದ ದೇವಸ್ಥಾನಗಳ ಹುಂಡಿ ಹಣ ಕದಿಯುತ್ತಿದ್ದ ಕಳ್ಳನನ್ನು ಸೆರೆ ಹಿಡಿದ ಸ್ಥಳೀಯರು
ತೀರ್ಥಹಳ್ಳಿ : ದೇವಸ್ಥಾನದ ಹುಂಡಿ ಹಣವನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಸ್ಥಳೀಯರು ಒಪ್ಪಿಸಿರುವ ಘಟನೆ ಕಟ್ಟಹಕ್ಕಲು ಸಮೀಪ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಕಟ್ಟಹಕ್ಕಲು ಸಮೀಪದ ಹೊಸಕೆರೆ ಬಳಿಯ ದೇವಸ್ಥಾನವೊಂದರಲ್ಲಿ ಕಳ್ಳನೊಬ್ಬ ಕಳ್ಳತನ ಮಾಡಿ ಆ ಹಣದಲ್ಲಿ ಎಣ್ಣೆ ಖರೀದಿ ಮಾಡಲು ಬಾರ್ ಗೆ ತೆರಳಿದ್ದಾನೆ. ಬಾರ್ ನಲ್ಲಿ ಹಣ ನೀಡಿದಾಗ ನೋಟಿನಲ್ಲಿ ಕುಂಕುಮದ ಕಲೆ ಇರುವುದನ್ನು ಗಮನಿಸಿದ ಬಾರ್ ಮಾಲೀಕರು ಅನುಮಾನಗೊಂಡು ಕೂಡಲೇ ಆತನನ್ನು ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ
ಕೂಡಲೇ ಪೊಲೀಸರಿಗೆ ಕರೆ ಮಾಡಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಬಾರ್ ಮಾಲೀಕ ವರ್ಧನ್ ಹಾಗೂ ಆತನ ಸ್ನೇಹಿತ ನಿತಿನ್ ಅವರು ಮಾಡಿದ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ