ಆಟವಾಡುವಾಗಲೇ ಹೃದಯಾಘಾತಕ್ಕೆ ತುತ್ತಾಗಿ ಕ್ರಿಕೆಟಿಗ ಎಸ್ ಎಲ್ ಅಕ್ಷಯ್ ವಿಧಿವಶ ! Heart attack

ಆಟವಾಡುವಾಗಲೇ ಹೃದಯಾಘಾತಕ್ಕೆ ತುತ್ತಾಗಿ  ಕ್ರಿಕೆಟಿಗ ಎಸ್ ಎಲ್ ಅಕ್ಷಯ್ ವಿಧಿವಶ !

ಶಿವಮೊಗ್ಗ : ಕ್ರಿಕೆಟ್ ಆಟವಾಡುವಾಗಲೇ ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ರಣಜಿ ಆಟಗಾರ ಎಸ್ ಎಲ್ ಅಕ್ಷಯ್ (39) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರು ಮೂಲತಃ ಶಿವಮೊಗ್ಗದವರಾಗಿದ್ದಾರೆ. 

ಮೇ 24 ರಂದು ಬೆಂಗಳೂರಿನ ಎಸ್ ಎಲ್ ಎಸ್ ಕ್ರೀಡಾಂಗಣದಲ್ಲಿ ಕೆಎಸ್’ಸಿಎ 3 ನೇ ಡಿವಿಜನ್ ಲೀಗ್ ಪಂದ್ಯದಲ್ಲಿ ಅಕ್ಷಯ್ ಆಟವಾಡುತ್ತಿದ್ದರು. 4 ಓವರ್ ಔಲಿಂಗ್ ಮಾಡಿದ್ದರು. ಆಟವಾಡುತ್ತಿದ್ದ ವೇಳೆಯೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. 

ಈ ಹಿನ್ನೆಲೆಯಲ್ಲಿ ಅಕ್ಷಯ್ ಅವರು ಮೈದಾನದಿಂದ ಪೆವಿಲಿಯನ್ ಗೆ ನಿರ್ಗಮಿಸಿದ್ದಾರೆ. ಬಳಿಕ ನೀರು ಕುಡಿಯುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. 
ಅಕ್ಷಯ್ ಅವರು ಕರ್ನಾಟಕದ ಪರ 6 ರಣಜಿ, 3 ಏಕದಿನ ಪಂದ್ಯಗಳನ್ನಾಡಿದ್ದರು. ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಕ್ಲಬ್ನ ಆಟಗಾರರಾಗಿದ್ದರು. ಮಧ್ಯಮ ವೇಗದ ಬೌಲರ್ ಆಗಿದ್ದರು. ಜೊತೆಗೆ ಉತ್ತಮ ಬ್ಯಾಟರ್ ಆಗಿಯೂ ಗಮನ ಸೆಳೆದಿದ್ದರು.  ಸದ್ಯ ಕರ್ನಾಟಕ ಅಂಡರ್-19 ಕ್ರಿಕೆಟ್ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.





Previous Post Next Post