ನಾಳೆ ತೀರ್ಥಹಳ್ಳಿಯ ಈ ಭಾಗದಲ್ಲಿ ಕರೆಂಟ್ ಇಲ್ಲ..!
ತೀರ್ಥಹಳ್ಳಿ : ಮೇ 26ರ ಮಂಗಳವಾರದಂದು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಬೆಟ್ಟಮಕ್ಕಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ, ತೀರ್ಥಹಳ್ಳಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯ ಪ್ರದೇಶಗಳು, ಸೇರಿ ಹಲವೆಡೆ ವಿದ್ಯುತ್ ಇರುವುದಿಲ್ಲ ಎಂದು ತೀರ್ಥಹಳ್ಳಿ ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತೀರ್ಥಹಳ್ಳಿ ಪಟ್ಟಣ, ಮುಳುಬಾಗಿಲು, ಹೊಸಳ್ಳಿ , ಹಾರೋಗೊಳಿಗೆ, ಮೇಲಿನಕುರುವಳ್ಳಿ, ದೇವಂಗಿ,
ಬಸವಾನಿ, ಮೇಳಿಗೆ, ಕಟ್ಟೆಹಕ್ಕಲು, ಶೇಡ್ಗಾರು, ನೆರಟೂರು, ಆರಗ, ಸಾಲೂರು, ನೊಣಬೂರು, ಅರಳಸುರುಳಿ , ಹೊದಲ ಅರಳಾಪುರ, ತ್ರಿಯಂಬಕಪುರ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಗ್ಗೆ 9-00 ಗಂಟೆಯಿಂದ
ಸಂಜೆ 6-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
Tags:
ತೀರ್ಥಹಳ್ಳಿ ಸುದ್ದಿ