ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ? - ಮಧುಬಂಗಾರಪ್ಪರ ಕುರ್ಚಿ ಕಥೆ ಏನಾಗುತ್ತೆ?
ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ಬಹುತೇಕ ಇಂದು ಕೊನೆಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯಪಾಲರ ಭೇಟಿಗೆ ಸಮಯ ಕೇಳಿ ರಾಜೀನಾಮೆ ನೀಡುವ ವಿಚಾರ ಕೇಳಿ ಬಂದಿದ್ದು ಪದತ್ಯಾಗಕ್ಕೆ ಕ್ಷಣಗಣನೆ ಆರಂಭವಾಗಿದೆ.. ಮುಖ್ಯಮಂತ್ರಿ ಬದಲಾವಣೆ ಬೆನ್ನಲ್ಲೇ ಈಗ ಶಿವಮೊಗ್ಗ ಜಿಲ್ಲೆಯ ರಾಜಕೀಯದ ಬಗ್ಗೆ ಈಗ ಭಾರಿ ಕುತೂಹಲ ಮೂಡಿಸಿದೆ.
ಶಿಕ್ಷಣ ಸಚಿವರ ಕಥೆ ಏನು?
ಸಿದ್ದರಾಮಯ್ಯನವರ ರಾಜೀನಾಮೆ ನಂತರದಲ್ಲಿ ಸಚಿವರ ಸ್ಥಾನದಲ್ಲಿ ಸಂಪೂರ್ಣವಾಗಿ ಬದಲಾಗುವ ಸಾಧ್ಯತೆ ಇದೆ. ಅದರಲ್ಲಿ ಬಹು ಮುಖ್ಯವಾಗಿ ಶಿವಮೊಗ್ಗದ ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪನವರ ಸಚಿವ ಸ್ಥಾನದ ವಿಚಾರಕ್ಕೆ ಸಂಬಂಧಪಟ್ಟಂತೆ ಬದಲಾವಣೆ ಆಗುತ್ತಾ? ಅನ್ನುವಂತಹ ಮಾತುಗಳು ಶಿವಮೊಗ್ಗ ಜನರಲ್ಲಿ ಕೇಳಿ ಬರುತ್ತಿದೆ.. ನೂತನ ಮಂತ್ರಿಮಂಡಲದಲ್ಲಿ ಮಧು ಬಂಗಾರಪ್ಪನವರ ಹೆಸರಿನ ಬದಲಾಗಿ ಬೇರೆಯವರ ಹೆಸರು ಕೂಡ ಕೇಳಿ ಬರುತ್ತಿದ್ದು ಹಾಗೆನಾದರೂ ಆದಲ್ಲಿ ಮಧು ಬಂಗಾರಪ್ಪನವರ ಕಥೆ ಏನಾಗುತ್ತೆ? ಅನ್ನುವಂತಹ ಪ್ರಶ್ನೆ ಸಹ ಮೂಡಿದೆ..
ಈಗಾಗಲೇ ಶಿಕ್ಷಣ ಸಚಿವರಾಗಲು ಕೆಲವು ಹೆಸರುಗಳು ಬರುತ್ತಿದ್ದು ಅದಲ್ಲರಲ್ಲೂ ಪ್ರಮುಖವಾಗಿ ಬಿ.ಕೆ ಹರಿಪ್ರಸಾದ್ ಅವರ ಹೆಸರು ಮುಂಚೂಣಿಯಲ್ಲಿದೆ. ಬಿ ಕೆ ಹರಿಪ್ರಸಾದ್ ಒಂದು ವೇಳೆ ಶಿಕ್ಷಣ ಸಚಿವರಾದರೆ ಬಹುತೇಕ ಶಿವಮೊಗ್ಗ ಜಿಲ್ಲೆಗೂ ಜಿಲ್ಲಾ ಉಸ್ತುವಾರಿ ಸಚಿವರಾಗವ ಸಾಧ್ಯತೆ ಕೂಡ ಬಹಳಷ್ಟು ಇದೆ.. ಇನ್ನುಳಿದಂತೆ ಶಿವಮೊಗ್ಗ ಜಿಲ್ಲೆಯ ಬೇರೆ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಡೌಟ್ ಎನ್ನುವ ಮಾತು ರಾಜಕೀಯ ಮೂಲಗಳಿಂದ ಕೇಳಿ ಬರುತ್ತಿದೆ.. ಸಾಗರದ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರೂ ಸಹ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನುವಂತಹ ಮಾತು ಶಿವಮೊಗ್ಗದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ..
ಒಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆಯಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಸಚಿವ ಸ್ಥಾನಕ್ಕೂ ಬ್ರೇಕ್ ಬೀಳುತ್ತಾ? ಅಥವಾ ನೂತನ ಸಚಿವ ಸ್ಥಾನ ಸಿಗುತ್ತಾ? ಕಾದು ನೋಡಬೇಕಿದೆ...