ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಿದೆ ದರ ?
ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ದರ ಮತ್ತೊಮ್ಮೆ ಏರಿಕೆಯಾಗಿದೆ. ಈ ತಿಂಗಳಲ್ಲಿ ಮೂರನೇ ಬಾರಿಗೆ ದರ ಹೆಚ್ಚಳವಾಗಿದೆ.
ಪೆಟ್ರೋಲ್ ನಿನ್ನೆ ರೂ 108.06 ಇದ್ದ ಲೀಟರ್ ಪೆಟ್ರೋಲ್ ದರವು ಇಂದು ರೂ 108.99 ಗೆ ಏರಿಕೆಯಾಗಿದೆ.
ಡೀಸೆಲ್ ನಿನ್ನೆ ರೂ 95.12 ಇದ್ದ ಲೀಟರ್ ಡೀಸೆಲ್ ದರವು ಇಂದು ರೂ 97.07 ತಲುಪಿದೆ. ಪವರ್ ಪೆಟ್ರೋಲ್ ನಿನ್ನೆ ರೂ 117.99 ಇದ್ದ ದರವು ಇಂದು ರೂ 118.93 ಗೆ ಹೆಚ್ಚಳವಾಗಿದೆ.
ಈ ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮೂರನೇ ಬಾರಿ ಹೆಚ್ಚಳವಾಗುತ್ತಿದೆ. ಮೇ 15ರಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ರೂ 3.29 ಹೆಚ್ಚಳವಾಗಿತ್ತು. ಆನಂತರ ಮೇ 19ರಂದು 95 ಪೈಸೆ ಏರಿಕೆ ಮಾಡಲಾಗಿತ್ತು.
Tags:
ಶಿವಮೊಗ್ಗ ಸುದ್ದಿ