ಮಕ್ಕಳ ಜೊತೆ ಮಹಿಳೆ ನಾಪತ್ತೆ - ಪತ್ತೆಯಾದರೆ ಮಾಳೂರು ಠಾಣೆಗೆ ಮಾಹಿತಿ ನೀಡಲು ಮನವಿ Missing

ಮಕ್ಕಳ ಜೊತೆ ಮಹಿಳೆ ನಾಪತ್ತೆ -  ಪತ್ತೆಯಾದರೆ ಮಾಳೂರು ಠಾಣೆಗೆ ಮಾಹಿತಿ ನೀಡಲು ಮನವಿ 
ತೀರ್ಥಹಳ್ಳಿ :  ತಾಲೂಕು ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ 17ನೇ ಮೈಲಿಕಲ್ಲು, ಕಣಗಲಕೊಪ್ಪ ಗ್ರಾಮ ನಿವಾಸಿ ಅನಿಲ್ ಕುಮಾರ್ ಎಂಬುವವರ ಪತ್ನಿ ತವರು ಮನೆಗೆಂದು ಮಕ್ಕಳನ್ನು ಕರೆದುಕೊಂಡು ಮೇ.13 ರಂದು ಹೋದವರು ತವರು ಮನೆಗೂ ಹೋಗದೆ ಈವರೆಗೆ ಮನೆಗೂ ವಾಪಸಾಗಿರುವುದಿಲ್ಲ. 

ಸುಮಾ ಕೆ.ಎಸ್. : 32 ವರ್ಷ, 5.0 ಅಡಿ ಎತ್ತರ, ದುಂಡುಮುಖ, ದೃಢಕಾಯ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.

ಜಯಂತ್: 14 ವರ್ಷ, 04 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಚೌಕಳಿ ಶರ್ವ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

ವಿಸ್ಮಿತ: 12 ವರ್ಷ, 04 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ 

ಈ ಮೂರು ಜನಗಳ ಬಗ್ಗೆ ಸುಳಿವು ಇದ್ದಲ್ಲಿ ಮಾಳೂರು ಪೊಲೀಸ್ ಠಾಣೆಯನ್ನು 08181-235142/228310/08182-261413/9480803353/9480803333/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.





Previous Post Next Post