ನಾಳೆ ಮಾಧವ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶತಚಂಡಿಕಾಯಾಗ
ತೀರ್ಥಹಳ್ಳಿ : ಪಟ್ಟಣದ ರಥ ಬೀದಿಯ ಶ್ರೀ ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ಮಾಧವ ದೇವಸ್ಥಾನದಲ್ಲಿ ಅಧಿಕ ಜೇಷ್ಠ ಶುದ್ಧ ಪೂರ್ಣಿಮೆಯ ದಿನವಾದ 31-5-26 ರ ಭಾನುವಾರದಂದು ಅಂದರೆ ನಾಳೆಯ ದಿನ ಲೋಕಕಲ್ಯಾಣಾರ್ಥವಾಗಿ ಶತಚಂಡಿಕಾಯಾಗವನ್ನು ನಡೆಸಲಾಗುತ್ತಿದೆ..
ಬೆಳಗ್ಗೆ ಶ್ರೀ ಮಾಧವ ದೇವರಿಗೆ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಆನಂತರ ದೇವಸ್ಥಾನದ ಆವರಣದಲ್ಲಿ ಶತಚಂಡಿಕಾಯಾಗ, ಸಂಜೆ ಶ್ರೀ ಚಕ್ರ ಪೂಜೆ ನಡೆಯಲಿದೆ. ಈ ಎಲ್ಲಾ ದೇವತಾ ಕಾರ್ಯದಲ್ಲಿ ಭಕ್ತಾದಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಲು ದೇವಸ್ಥಾನದ ಸಮಿತಿಯವರು ವಿನಂತಿಸಿದ್ದಾರೆ.
Tags:
ಮಾಧವ ದೇವಸ್ಥಾನ