AIIMSನಲ್ಲಿ245ನೇ ರ‌್ಯಾಂಕ್ ಪಡೆದ ವಾಗ್ದೇವಿ ಸಂಸ್ಥೆಯ
ಡಾ. ದೀಕ್ಷಿತ್ ಎಂ.ವಿ
ತೀರ್ಥಹಳ್ಳಿ : ನಮ್ಮ ಸಮಾಜ ಇಂದಿಗೂ ವೈದ್ಯರನ್ನು ದೇವರಂತೆ ಕಾಣುವುದು ಸತ್ಯವೇ ಸರಿ. ವೈದ್ಯಕೀಯ ಲೋಕದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಬೇಕು ಎಂಬುದು ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಯ ಕನಸು. ಈ ದೆಸೆಯಲ್ಲಿ ಸಾಗಿರುವ ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಡಾ. ದೀಕ್ಷಿತ್ ಎಂ.ವಿ ಇವರು ರಾಜ್ಯದ ಪ್ರತಿಷ್ಠಿತ ಸರ್ಕಾರಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ MBBS ಮುಗಿಸಿ, ನವದೆಹಲಿಯ AIIMS ರವರು ನಡೆಸುವ ರಾಷ್ಟ್ರಮಟ್ಟದ INI.CET (MD ಸೀಟ್ ಗೆ ಅರ್ಹತೆ) ಪರೀಕ್ಷೆಯಲ್ಲಿ ದೇಶಕ್ಕೆ 245ನೇ ರ‌್ಯಾಂಕ್ ಗಳಿಸಿರುತ್ತಾರೆ..
ಇವರು 2016-17 ನೆಯ ಶೈಕ್ಷಣಿಕ ವರ್ಷದಲ್ಲಿ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಮುಗಿಸಿ, ರಾಜ್ಯಕ್ಕೆ 8 ನೆಯ ರ‌್ಯಾಂಕ್ ಹಾಗೂ ತಾಲ್ಲೂಕಿನ ಟಾಪರ್ ಆಗುವುದರ ಮೂಲಕ ಎಲ್ಲರ ಗಮನಸೆಳೆದಿದ್ದರು. ಇವರು ಸೊಪ್ಪುಗುಡ್ಡೆಯ ಯಶೋದಾ ಹಾಗೂ ವಿಜಯೇಂದ್ರ ದಂಪತಿಗಳ ಪುತ್ರರಾಗಿದ್ದು AIIMSನಲ್ಲಿ ಇವರ ಮುಂದಿನ ವೈದ್ಯಕೀಯ ವಿದ್ಯಾಭ್ಯಾಸವು ಅತ್ಯುತ್ತಮವಾಗಲಿ, ಅಲ್ಲಿಯೂ ಚಿನ್ನದ ಪದಕವನ್ನು ಪಡೆದುಕೊಳ್ಳಲಿ, ರಾಷ್ಟ್ರಕ್ಕೆ ಅತ್ಯುತ್ತಮ ವೈದ್ಯನಾಗಿ ರಾಷ್ಟ್ರಸೇವೆಯನ್ನು ಮಾಡಬೇಕೆಂಬ ಅವರ ಕನಸುನಸಾಗಲಿ ಎಂದು ವಾಗ್ದೇವಿ ಬಳಗದವರು ಆಶಿಸಿ ಶುಭಹಾರೈಸಿರುತ್ತಾರೆ.
Tags:
ವಾಗ್ದೇವಿ ಸಂಸ್ಥೆ