ತೀರ್ಥಹಳ್ಳಿಯಲ್ಲಿ ಮಟನ್ ಅಂಗಡಿಯವನಿಂದ ಧಮ್ಕಿ.- ದಾದಾಗಿರಿ .!
ಶಾಸಕರ ತವರಿನಲ್ಲೇ ಬೆದರಿಕೆ ಹಾಕಿದ ಅನ್ಯಕೋಮಿನ ವ್ಯಕ್ತಿ..!
ತೀರ್ಥಹಳ್ಳಿ : ಮಟನ್ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಅನ್ಯಕೋಮಿನ ವ್ಯಕ್ತಿಯೋರ್ವ ಸ್ಥಳೀಯರಿಗೆ ಧಮ್ಕಿ ಹಾಕಿದ್ದಲ್ಲದೆ ದಾದಾಗಿರಿ ನಡೆಸಿರುವ ಘಟನೆ ಶಾಸಕರ ತವರಿನಲ್ಲೇ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ನಡೆದ ಮಾರಿಕಾಂಬಾ ಜಾತ್ರಾ ಸಂದರ್ಭದಲ್ಲಿ ಹಿಂದೂ ವ್ಯಕ್ತಿಯೋರ್ವನ ಅಂಗಡಿಯಲ್ಲಿ ಸಾರ್ವಜನಿಕರು ಮಟನ್ ತೆಗೆದುಕೊಂಡಿದ್ದಕ್ಕೆ ಅನ್ಯಕೋಮಿನ ಅಂಗಡಿಯ ವ್ಯಕ್ತಿಯೊಬ್ಬ ಸಾರ್ವಜನಿಕರಿಗೆ ಧಮ್ಕಿ ಹಾಕಿದ್ದಾನೆ. ಅಷ್ಟೇ ಅಲ್ಲದೆ ಕತ್ತಿ ಹಿಡಿದು ದಾದಾಗಿರಿ ನಡೆಸಿದ್ದಾನೆ. ಸಾರ್ವಜನಿಕರು ಅಂಗಡಿಗಳಲ್ಲಿ ಸಾಮಾನುಗಳನ್ನು ತೆಗೆದುಕೊಳ್ಳುವುದಕ್ಕೂ ಈ ರೀತಿಯ ಘಟನೆ ನಡೆಯುತ್ತಿರುವುದು ವಿಷಾಧನೀಯವಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಥಳೀಯರು ಈಗಾಗಲೇ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ