ತೀರ್ಥಹಳ್ಳಿಯ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರಿಂದ ಖಡಕ್ ಸೂಚನೆ
ತೀರ್ಥಹಳ್ಳಿ : ಪೊಲೀಸ್ ಠಾಣೆಯ ವ್ಯಾಪ್ತಿಯ ದ್ವಿಚಕ್ರ ಸವಾರರು ಮತ್ತು ವಾಹನ ಚಾಲಕರುಗಳಿಗೆ, ವಾಹನ ಸವಾರರು ಮತ್ತು ಚಾಲಕರುಗಳು ತಮ್ಮ ವಾಹನಗಳಿಗೆ ವಾಹನ ತಯಾರಿಕಾ ಕಂಪನಿಗಳು ಅಳವಡಿಸಿರುವ ಸೈಲೆನ್ಸ್ ರ್ ಗಳನ್ನು ತಮಗೆ ಬೇಕಾದ ಹಾಗೆ ಮಾರ್ಪಡಿಸಿಕೊಂಡಿರುವುದಲ್ಲದೆ ಬದಲಾಯಿಸಿ ಬೇರೆ ಕರ್ಕಶ ಶಬ್ದಗಳು ಬರುವ ಹಾಗೆ ಸೈಲೆನ್ಸ್ ರ್ ಗಳನ್ನು ಅವಳಡಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಿಗೆ, ಹಿರಿಯ ನಾಗರೀಕರು ಮತ್ತು ಮಕ್ಕಳಿಗೆ ತೀವ್ರವಾದ ಸಮಸ್ಯೆಯಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದೆ.
ಈ ಬಗ್ಗೆ ಎಲ್ಲಾ ವಾಹನ ಸವಾರರು ಮತ್ತು ಚಾಲಕರುಗಳು ತಮ್ಮ ವಾಹನಗಳಿಗೆ ನಿಗದಿಪಡಿಸಿದ ಸೈಲೆನ್ಸ್ ರ್ ಗಳನ್ನು ಮಾತ್ರ ಬಳಸುವುದು. ಜೊತೆಯಲ್ಲಿ ದ್ವಿಚಕ್ರ ವಾಹನ ಸವಾರರು ಅರ್ಧ ಹಾಗೂ ಗುಣಮಟ್ಟವಿಲ್ಲದ ( ಐ.ಎಸ್.ಐ. ಮಾರ್ಕ್ ಇರದ) ಹೆಲ್ಮೆಟ್ ಗಳನ್ನು ಧರಿಸುತ್ತಿದ್ದು, ಅವುಗಳು ಸುರಕ್ಷಿತವಲ್ಲದೆ ಇರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ದ್ವಿಚಕ್ರ ಸವಾರರು ಮತ್ತು ಹಿಂಬದಿ ಸವಾರರು ಐ.ಎಸ್.ಐ. ಮಾರ್ಕ್ ಹೊಂದಿರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಗಳನ್ನು ಧರಿಸಿ ದ್ವಿಚಕ್ರವಾಹನಗಳನ್ನು ಚಲಾಯಿಸುವುದು.
ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ITMS ( Integrated Traffic Management System) ಅಡಿಯಲ್ಲಿ ಪೋಟೋ ತೆಗೆದು ವಾಹನ ಮಾಲಿಕರಿಗೆ ನೋಟೀಸ್ ಕಳುಹಿಸಿಕೊಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ