ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ರ‌್ಯಾಂಕ್ ಬಂದಿದ್ದ ದೀಕ್ಷಾ ಆರ್ ಸಿಇಟಿಯಲ್ಲೂ ದಾಖಲೆ..!CET Rank

ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ರ‌್ಯಾಂಕ್ ಬಂದಿದ್ದ ದೀಕ್ಷಾ ಆರ್ ಸಿಇಟಿಯಲ್ಲೂ ದಾಖಲೆ..!

ರಾಜ್ಯಮಟ್ಟದಲ್ಲಿ ತನ್ನ ಹೆಸರನ್ನು ಮುದ್ರಿಸಿಕೊಂಡ
ವಾಗ್ದೇವಿ ಶಿಕ್ಷಣ ಸಂಸ್ಥೆ..!

ತೀರ್ಥಹಳ್ಳಿ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದಿದ್ದ ದೀಕ್ಷಾ  ಆರ್ 
ಸಿಇಟಿಯಲ್ಲೂ ದಾಖಲೆ ಬರೆದಿದ್ದಾರೆ.

ಹೌದು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ದೀಕ್ಷಾ ಆರ್ ಸಿಇಟಿ ಪರೀಕ್ಷೆಯಲ್ಲಿ  AGRI ಯಲ್ಲಿ 248 ನೇ  ರ‌್ಯಾಂಕ್ ಪಡೆದರೆ ಇಂಜಿನಿಯರಿಂಗ್ ನಲ್ಲಿ 650 ನೇ ರ‌್ಯಾಂಕ್ ಹಾಗೂ BNYS ನಲ್ಲಿ 701 ನೇ ರ‌್ಯಾಂಕ್ ಪಡೆದು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ವಾಗ್ದೇವಿ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ದೀಕ್ಷಾ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಂಬರ್ 1 ಸ್ಥಾನ ಪಡೆದಿದ್ದರು. ಹಾಗಾಗಿ ಅವರು ಸಿಇಟಿ ಪರೀಕ್ಷೆಯಲ್ಲೂ  ಸಾಧನೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದು ಈಗ ನಿಜವಾಗಿದೆ. ದೀಕ್ಷಾ ರವರ ಸಾಧನೆಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಉಪನ್ಯಾಸಕ ವೃಂದ, ಮತ್ತು ಪೋಷಕರು ಅಭಿನಂದನೆ ತಿಳಿಸಿದ್ದಾರೆ.

ರಾಜ್ಯಮಟ್ಟದಲ್ಲಿ ತನ್ನ ಹೆಸರನ್ನು ಮುದ್ರಿಸಿಕೊಂಡ
ವಾಗ್ದೇವಿ ಶಿಕ್ಷಣ ಸಂಸ್ಥೆ

ತೀರ್ಥಹಳ್ಳಿಯಲ್ಲಿ ಈಗಾಗಲೇ ನಂಬರ್ 1 ಪಟ್ಟವನ್ನ ತನ್ನ ತೆಕ್ಕೆಗೆ ಹಾಕಿಕೊಂಡಿರುವ ವಾಗ್ದೇವಿ ಶಿಕ್ಷಣ ಸಂಸ್ಥೆ ಈ ಬಾರಿ ರಾಜ್ಯದಲ್ಲಿ ತನ್ನ ಹೆಸರನ್ನು ಮುದ್ರಿಸಿಕೊಂಡಿತ್ತು. ದ್ವಿತೀಯ ಪಿಯುಸಿ, ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ
ರ‌್ಯಾಂಕ್ ಪಡೆಯುವ ಮೂಲಕ ತಾವು ಶಿಕ್ಷಣಕ್ಕಾಗಿ ಎಷ್ಟರ ಮಟ್ಟಿಗೆ ಸಮಯಾವಕಾಶವನ್ನು ನೀಡುತ್ತಿದ್ದೇವೆ ಎಂಬುದನ್ನು ತಿಳಿಸಿತ್ತು. ಈಗ ಸಿಇಟಿ ಪರೀಕ್ಷೆಯಲ್ಲೂ ವಾಗ್ದೇವಿ ಶಿಕ್ಷಣ ಸಂಸ್ಥೆಯ ಒಂಭತ್ತು ವಿದ್ಯಾರ್ಥಿಗಳು ರ‌್ಯಾಂಕ್ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ತನ್ನ ಹೆಸರನ್ನು ಮುದ್ರಿಸಿಕೊಂಡಿದೆ. ಒಟ್ಟಿನಲ್ಲಿ ತಾಲೂಕು, ಜಿಲ್ಲೆ ಮಾತ್ರವಲ್ಲದೆ ರಾಜ್ಯಮಟ್ಟದಲ್ಲೂ ತನ್ನ ಹೆಸರನ್ನು ಅಚ್ಚೋತ್ತುವಂತೆ ಮಾಡಿದೆ.



Previous Post Next Post