ತೀರ್ಥಹಳ್ಳಿ ಜೆಸಿ ಸರ್ಕಾರಿ ಆಸ್ಪತ್ರೆಗೆ ಹೊಸ ವ್ಯವಸ್ಥೆ – ಸಾರ್ವಜನಿಕರಿಂದ ಮೆಚ್ಚುಗೆ Tth

ತೀರ್ಥಹಳ್ಳಿ ಜೆಸಿ ಸರ್ಕಾರಿ ಆಸ್ಪತ್ರೆಗೆ ಹೊಸ ವ್ಯವಸ್ಥೆ – ಸಾರ್ವಜನಿಕರಿಂದ ಮೆಚ್ಚುಗೆ

ತೀರ್ಥಹಳ್ಳಿ : ಜೆಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ಪಟ್ಟಣಗಳಿಂದ ದಿನನಿತ್ಯವಾಗಿ ಅನೇಕ ಬಡ ಮತ್ತು ಮಧ್ಯಮ ವರ್ಗದ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಯಾವ ವೈದ್ಯರು ಲಭ್ಯವಿದ್ದಾರೆ, ಯಾರು ರಜೆಯಲ್ಲಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ರೋಗಿಗಳು ಅನಗತ್ಯವಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು.

ಈ ಸಮಸ್ಯೆಯನ್ನು ಮನಗಂಡು ಆಸ್ಪತ್ರೆಯ ಸರ್ಕಾರದ ನಾಮನಿರ್ದೇಶನ ಸದಸ್ಯರು ಹಿಂದುಳಿದ ವರ್ಗ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುರುವಳ್ಳಿ ನಾಗರಾಜ್ ಅವರು ಉಳಿದ ಎಲ್ಲಾ ಸದಸ್ಯರ ಸಹಾಕರದಿಂದ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆಯ ಚೀಟಿ ಕೌಂಟರ್ ಬಳಿ ಆ ದಿನ ಲಭ್ಯವಿರುವ ವೈದ್ಯರು, ಯಾರು ರಜೆಯಲ್ಲಿದ್ದಾರೆ ಹಾಗೂ ಎಷ್ಟು ದಿನ ರಜೆಯಿರುತ್ತಾರೆ ಎಂಬ ದಿನಾಂಕ ಸಹಿತ ಮಾಹಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುವ ಬೋರ್ಡುಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ವ್ಯವಸ್ಥೆಯಿಂದ ರೋಗಿಗಳಿಗೆ ಸಮಯ ಉಳಿಯುವುದರ ಜೊತೆಗೆ, ಚಿಕಿತ್ಸೆ ಪಡೆಯುವ ಪ್ರಕ್ರಿಯೆ ಸುಗಮವಾಗಿದ್ದು, ಆಸ್ಪತ್ರೆಯ ಮೇಲಿನ ವಿಶ್ವಾಸವೂ ಹೆಚ್ಚಾಗಿದೆ. ನಾಗರಾಜ್ ಅವರ ಈ ಜನಪರ ಕಾರ್ಯವನ್ನು ತೀರ್ಥಹಳ್ಳಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಇಂತಹ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಶ್ಲಾಘನೀಯವಾಗಿದ್ದು, ಇತರ ಆಸ್ಪತ್ರೆಗಳಿಗೂ ಇದು ಮಾದರಿಯಾಗಿದೆ.





Previous Post Next Post