ಒನ್ ವೇ ರಸ್ತೆಯಲ್ಲಿ ಬಂದ - ಪೊಲೀಸ್ ಕೇಳಿದ್ದಕ್ಕೆ ದೇವಸ್ಥಾನದಲ್ಲಿ ಹೊಯ್ಲು ಕೊಡ್ತೀನಿ ಅಂದ - ತೀರ್ಥಹಳ್ಳಿಯಲ್ಲಿ ನಡೆದ ವಿಚಿತ್ರ ಘಟನೆ Tth

ಒನ್ ವೇ ರಸ್ತೆಯಲ್ಲಿ ಬಂದ - ಪೊಲೀಸ್ ಕೇಳಿದ್ದಕ್ಕೆ ದೇವಸ್ಥಾನದಲ್ಲಿ ಹೊಯ್ಲು ಕೊಡ್ತೀನಿ ಅಂದ - ತೀರ್ಥಹಳ್ಳಿಯಲ್ಲಿ ನಡೆದ ವಿಚಿತ್ರ ಘಟನೆ 

ತೀರ್ಥಹಳ್ಳಿ : ಪೊಲೀಸರ ಕೆಲಸಗಳು ಎಷ್ಟೊಂದು ಕಷ್ಟ ಎನ್ನುವುದಕ್ಕೆ ವಿಚಿತ್ರ ಪ್ರಸಂಗವೊಂದು ನಡೆದಿದ್ದು ಪೊಲೀಸರ ವಿರುದ್ಧದ ದೇವಸ್ಥಾನದಲ್ಲಿ ಹೊಯ್ಲು ಕೊಡಲು ಹೋದಂತಹ ವಿಚಿತ್ರ ಘಟನೆಗೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ಗಾಂಧಿ ಚೌಕದಿಂದ ಮಾರಿಕಾಂಬಾ ದೇವಸ್ಥಾನದ ರಸ್ತೆ, ಒನ್ ವೇ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ಬಂದಂತಹ ವ್ಯಕ್ತಿಯೊಬ್ಬನನ್ನ ಪೊಲೀಸರು ತಡೆದಿದ್ದಾರೆ. ಅಷ್ಟೇ ಅಲ್ಲದೆ ಆತ ಹೆಲ್ಮೆಟ್ ಸಹ ಹಾಕಿರಲಿಲ್ಲ. ಇದನ್ನು ಪ್ರೆಶ್ನೆ ಮಾಡಿದ ಪೊಲೀಸರಿಗೆ ಆತ ಹೇಳಿದಂತಹ ಮಾತು ನಿಜಕ್ಕೂ ಶಾಕ್ ಆಗಿದೆ. ಆತ ಏಕಾಏಕಿ ಮಾರಿಕಾಂಬ ದೇವಸ್ಥಾನದ ಮೆಟ್ಟಿಲನ್ನ ಹತ್ತಿ ನಾನು ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಣಿಕೆ ಹಾಕಿ ನಿಮ್ಮ ಮೇಲೆ ಹುಯ್ಲು ಕೊಡ್ತೀನಿ ಎಂದು ಹೇಳಿದ್ದಾನೆ. 

ಆ ವ್ಯಕ್ತಿಯ ಮಾತನ್ನು ಕೇಳಿದ ಪೊಲೀಸರು ಒಂದು ಕ್ಷಣಕ್ಕೆ ದಿಗ್ಭ್ರಮೆಗೊಂಡಿದ್ದಾರೆ. ಸಾರ್ವಜನಿಕರಿಗೆ ಒಳ್ಳೆಯದನ್ನು ಹೇಳಿದರು ಅರ್ಥ ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ ಆಗಿದೆ..







Previous Post Next Post