ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ - ಪ್ರಕರಣ ದಾಖಲು
ತೀರ್ಥಹಳ್ಳಿ: ತಾಲೂಕಿನ ಕುಪ್ಪಳ್ಳಿ ಸಮೀಪದ ಗಿಣಿಯ ಗ್ರಾಮದಲ್ಲಿ ದ್ವೇಷದ ಹಿನ್ನೆಲೆ ಕುಡಿಯುವ ನೀರಿನ ಬಾವಿಗೆ
ವಿಷ ಬೆರೆಸಿರುವ ಘಟನೆ ನಡೆದಿದೆ.
ಗಿಣಿಯ ಗ್ರಾಮದ ನಿವಾಸಿ ರಾಘವೇಂದ್ರ ಎಂಬುವವರ ಜಮೀನಿನ ಬಾವಿಗೆ ವಿಷ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ರಾಘವೇಂದ್ರ ಅವರು ಬಾವಿಯ
ಬಳಿ ಹೋಗಿದ್ದಾಗ, ನೀರಿನಲ್ಲಿ ವಿಷದ ವಾಸನೆ
ಬರುತ್ತಿರುವುದು ತಿಳಿದಿದೆ.. ಜಮೀನು ವಿವಾದದ
ಹಿನ್ನೆಲೆ ವಿಷ ಬೆರೆಸಿದ್ದಾರೆ ಎಂದು ದೂರಿನಲ್ಲಿ
ಆರೋಪಿಸಿದ್ದಾರೆ.
ಈ ಹಿಂದೆ ಸಹ ದ್ವೇಷದ ಹಿನ್ನಲೆಯಲ್ಲಿ ಇವರ ಮನೆಗೆ ಬೆಂಕಿ ಹಚ್ಚಿದ್ದರು. ಈಗ ದ್ವೇಷ ಮುಂದುವರೆದು ಬಾವಿಗೆ ವಿಷ ಬೆರೆಸಿದ್ದಾರೆ . ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
ತೀರ್ಥಹಳ್ಳಿ ಸುದ್ದಿ