ಹುಲಿಕಲ್ ಘಾಟಿ ಕುಸಿತ - ಪ್ರಕರಣವನ್ನು ಮುಚ್ಚಿ ಹಾಕಲು ಹಲವು ಪ್ರಭಾವಿಗಳ ಕೈವಾಡ?
ಎಫ್ಐಆರ್ ದಾಖಲಾಗದಂತೆ ಗುತ್ತಿಗೆದಾರನ ಬೆನ್ನಿಗೆ ನಿಂತ್ರ ತೀರ್ಥಹಳ್ಳಿಯ ಪ್ರಭಾವಿಗಳು?
ತೀರ್ಥಹಳ್ಳಿ : ಹುಲಿಕಲ್ ಘಾಟಿ ಕುಸಿತ ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಿ ಹಾಕಲು ಹಲವು ಪ್ರಭಾವಿಗಳ ಕೈವಾಡ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು ಅದರ ಜೊತೆಗೆ ಎಫ್ಐಆರ್ ದಾಖಲಾಗದಂತೆ ಗುತ್ತಿಗೆದಾರನ ಬೆನ್ನಿಗೆ ತೀರ್ಥಹಳ್ಳಿಯ ಪ್ರಭಾವಿಗಳು ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹುಲಿಕಲ್ ಘಾಟಿ ಕುಸಿತ ಪ್ರಕರಣ ನಡೆದು ಒಂದು ವಾರ ಕಳೆದರೂ ಇನ್ನು ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ
ಎಫ್ಐಆರ್ ದಾಖಲಾಗಿಲ್ಲ. ಸಾವಿಗೀಡಾದ ಶಬ್ಬೀರ್ ಸಂಬಂಧಿ ದೂರಿನಲ್ಲೇ ಹಲವು ಅನುಮಾನ ಹಾಗೂ
ಹಲವು ಲೋಪಗಳು ಕಂಡುಬಂದಿದೆ. ದೂರು ನೀಡುವ ವೇಳೆ ಶಬ್ಬೀರ್ ನಿಂದ ಸಹಿ ಮಾತ್ರ ಪಡೆದುಕೊಂಡ್ರ ಪ್ರಭಾವಿಗಳು? ಎಂಬ ಅನುಮಾನ ಸೃಷ್ಟಿ ಆಗಿದೆ. ಶಬ್ಬೀರ್ ಸಂಬಂಧಿ ಘಟನೆಯ ವೇಳೆ ಸ್ಥಳದಲ್ಲಿ ಇಲ್ಲದಿದ್ದರೂ ಅಲ್ಲೇ ಇದ್ದು ಕಣ್ಣಾರೆ ಘಟನೆಯನ್ನ ಕಂಡಂತೆ ದೂರು ನೀಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ತೀರ್ಥಹಳ್ಳಿಯ ಪ್ರಭಾವಿಗಳ ನೇತೃತ್ವದಲ್ಲಿ ಲಕ್ಷಾಂತರ ರೂಪಾಯಿಗಳ ಆಮಿಷ ಒಡ್ಡಲಾಯಿತೇ? ಈ ಒಂದು ಹಣದ ಆಮಿಷಕ್ಕೆ ಮಣ್ಣು ಕುಸಿತದಲ್ಲಿ ಜೀವ ಕಳೆದುಕೊಂಡ ಕುಟುಂಬ ಬಲಿಯಾಯಿತೇ? ಹುಲಿಕಲ್ ಘಾಟಿ ದುರಂತದಲ್ಲಿ ಜೀವ ಕಳೆದುಕೊಂಡವರ ಬೆಲೆ ಕೇವಲ 18 ಲಕ್ಷ ಮಾತ್ರನಾ?
ದೂರಿನ ಪ್ರತಿಗೆ ಶಬೀರ್ ಸಂಬಂಧಿಯಿಂದ ಸಿಹಿ ಪಡೆದ್ರಾ ಪ್ರಭಾವಿಗಳು? ಪ್ರಭಾವಿಗಳ ಹಸ್ತ ಕ್ಷೇಪದಿಂದ ದನಿ ಕಳೆದುಕೊಳ್ತಾ ಮೃತರ ಕುಟುಂಬಸ್ಥರ ಕೂಗು? ಎಂಬೆಲ್ಲ ಪ್ರೆಶ್ನೆಗಳು ಉದ್ಭವವಾಗಿದೆ.
ಇನ್ನು ಈ ಪ್ರಕರಣದಲ್ಲಿ ಕಾರ್ಮಿಕ ಇಲಾಖೆಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಕೆಲಸದ ವೇಳೆ ಮುಗಿದಿದ್ದರೂ ಕೆಲಸಗಾರರನ್ನ ಸ್ಥಳದಲ್ಲೇ ಉಳಿಸಿಕೊಂಡಿದ್ದ ಗುತ್ತಿಗೆದಾರರು
ಆದರೂ ಅವರ ಮೇಲೆ ಯಾವುದೇ ಕ್ರಮ ಆಗಿಲ್ಲ. ದೇಶದ ವಿವಿಧಡೆ ಈ ರೀತಿಯ ಘಟನೆಗಳು ಆದಾಗ ಗುತ್ತಿಗೆದಾರರ ಮೇಲೆ ಎಫ್ ಐ ಆರ್ ಉದಾಹರಣೆಗಳಿವೆ. ಆದರೆ ಹುಲಿಕಲ್ ಘಾಟಿ ಕುಸಿತದಲ್ಲಿ ಮೂರು ಜನ ಕಾರ್ಮಿಕರು ಸಾವಿಗೀಡಾದರೂ ಇನ್ನು ಎಫ್ಐಆರ್ ದಾಖಲಾಗಿಲ್ಲ.
ಘಟನೆಯಲ್ಲಿ ಸ್ಪಷ್ಟವಾಗಿ ಲೋಪಗಳು ಕಂಡರೂ ಕೇವಲ ಯು ಡಿ ಆರ್ ಗೆ ಸೀಮಿತವಾಗಿದ್ದು ಈ ಪ್ರಕರಣ ಸಂಪೂರ್ಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿರುವ ಸಂಶಯ ವ್ಯಕ್ತವಾಗಿದೆ.
ಈ ಪ್ರಕರಣದಲ್ಲಿ ಹಲವರ ಮೇಲೆ ಅನುಮಾನ ವ್ಯಕ್ತವಾಗಲು ಕಾರಣವೂ ಇದೆ. ಈ ಪ್ರಕರಣದಲ್ಲಿ ಎಫ್ ಐ ಆರ್ ಆಗದಂತೆ ಪ್ರಭಾವಿಗಳ ಕೈವಾಡ ಇದೆಯಾ? ಎಂಬ ಪ್ರಶ್ನೆ ಒಂದೆಡೆ ಮೂಡಿದರೆ ಪ್ರಭಾವಿಗಳ ಒತ್ತಡಕ್ಕೆ ಜಿಲ್ಲಾಡಳಿತ ಹಾಗೂ
ಪಿ ಡಬ್ಲ್ಯೂ ಡಿ ಇಲಾಖೆ ಮಣಿಯಿತಾ? ಹಾಗೂ ಈ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರ ಮೌನವಹಿಸಿದ್ದು ಯಾಕೆ? ಎಂಬ ಪ್ರೆಶ್ನೆ ಸಹ ಮೂಡಿದೆ.
ಒಟ್ಟಿನಲ್ಲಿ ಈ ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿರುವಂತೆ ಕಾಣಿಸುತ್ತಿದೆ..
Tags:
ಹುಲಿಕಲ್ ಘಾಟಿ