ಅರಣ್ಯ ಇಲಾಖೆ ಜಾಗದಲ್ಲಿ ಅನುಮತಿ ಇಲ್ಲದೆ ಮರ ಕಟಾವು - ಮರಕಟಾವಿನ ವೇಳೆ ಗೋ ಹ*ತ್ಯೆ.!
ತೀರ್ಥಹಳ್ಳಿ : ಅರಣ್ಯ ಇಲಾಖೆ ಜಾಗದಲ್ಲಿ ಅನುಮತಿ ಇಲ್ಲದೆ ಮರವನ್ನ ಕಡಿಯುವ ವೇಳೆ ಮರ ಒಂದು ಬಿದ್ದು ಹಸುವೊಂದು ಪ್ರಾಣವನ್ನ ತ್ಯಜಿಸಿದ ಘಟನೆ ನೀರುಳ್ಳಿಯಲ್ಲಿ ನಡೆದಿದೆ..
ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಳ್ಳಿಯಲ್ಲಿ ಕೌಶಿಕ್ ಎಂಬಾತ ಅರಣ್ಯ ಇಲಾಖೆಯ ಜಾಗದಲ್ಲಿ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೆ ಮರವನ್ನ ಕಟಾವು ಮಾಡುತ್ತಿದ್ದರು. ಈ ವೇಳೆ ಅದೇ ಜಾಗದಲ್ಲಿ ಬಂದಂತಹ ಹಸುವೊಂದು ಕಟಾವು ಮಾಡುತ್ತಿದ್ದ ಮರ ಹಸುವಿನ ಮೇಲೆ ಬಿದ್ದ ಪರಿಣಾಮ ಅಲ್ಲೇ ಹಸುವು ಪ್ರಾಣವನ್ನು ಬಿಟ್ಟಿದೆ.
ಈ ಹಸುವು ಕುಂದೇಕೊಪ್ಪದ ಮಂಜುನಾಥ್ ಎಂಬುವರದಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ಜರುಗಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ