ಸಾರ್ವಜನಿಕ ಕ್ರೀಡಾಂಗಣದಲ್ಲಿ ಆರ್ ಟಿ ಓ ವತಿಯಿಂದ ತಪಾಸಣೆ - ಯುವ ಕಾಂಗ್ರೆಸ್ ಆಕ್ರೋಶ
ತೀರ್ಥಹಳ್ಳಿ : ತೀರ್ಥಹಳ್ಳಿ ಜೂನಿಯರ್ ಕಾಲೇಜು ಪಕ್ಕದಲ್ಲಿರುವ ಸಾರ್ವಜನಿಕ ಕ್ರೀಡಾಂಗಣವನ್ನು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಗೊಳಿಸಿ ಯುವ ಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಅನುಮತಿ ಪಡೆದು ಕ್ರೀಡಾಂಗಣಕ್ಕೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಇತ್ತೀಚಿಗೆ ಕ್ರಿಕೆಟ್ ಆಟವನ್ನು ಆಡಿಸಲಾಗಿತ್ತು. ಆದರೆ ಈಗ ಆರ್ ಟಿ ಓ ವತಿಯಿಂದ ಕ್ರೀಡಾಂಗಣದಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದು ಇದಕ್ಕೆ ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡುವ ಸಲುವಾಗಿ ಯುವ ಕಾಂಗ್ರೆಸ್ ಹಲವು ಹೋರಾಟಗಳನ್ನ ನಡೆಸಿ ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡುತ್ತಾ ಬಂದಿದೆ ಆದರೆ ಇತ್ತೀಚಿಗೆ ಪಟಾಕಿ ಮಳಿಗೆ ಇಟ್ಟಾಗಲು ಸಹ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿತ್ತು. ಆನಂತರ ಕ್ರಿಕೆಟ್ ಪಿಚ್ಗೆ ಯಾವುದೇ ತೊಂದರೆ ಆಗಬಾರದೆಂದು ತಿಳಿಸಿ ಆನಂತರದಲ್ಲಿ ಪಟಾಕಿ ಅಂಗಡಿ ಮಳಿಗೆಗೆ ಅವಕಾಶ ನೀಡಲಾಗಿತ್ತು..
ಆದರೆ ಇಂದು ಏಕಾಏಕಿ ಆರ್ ಟಿ ಓ ಕಚೇರಿಯಿಂದ ವಾಹನಗಳ ತಪಾಸಣೆಯನ್ನು ಮಾಡುತ್ತಿದ್ದರು ಇದಕ್ಕೆ ಯುವ ಕಾಂಗ್ರೆಸ್ ತೀವ್ರ ಆಕ್ರೋಶವನ್ನು ವ್ಯಕ್ತಪಡಿದೆ. ಇನ್ನ ಮುಂದೆ ಯಾವುದೇ ವಾಹನಗಳನ್ನ ಕ್ರೀಡಾಂಗಣದ ಒಳಗೆ ತರಬಾರದು ಹಾಗೇನಾದರೂ ತಂದಿದ್ದೆ ಆದಲ್ಲಿ ಕ್ರೀಡಾಂಗಣದಲ್ಲೇ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೇಯಸ್ ತಿಳಿಸಿದ್ದಾರೆ..
Tags:
ಕಾಂಗ್ರೆಸ್ ಸುದ್ದಿ