ಶಿಕಾರಿಪುರ ಕಾಲೇಜಿನಲ್ಲಿ ಎಚ್ ಐ ವಿ / ಏಡ್ಸ್ ಕುರಿತು ಅರಿವು ಕಾರ್ಯಗಾರ
ಶಿವಮೊಗ್ಗ : ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜಶಾಸ್ತ್ರ ವಿಭಾಗ ಸ್ಪಂದನ ವೇದಿಕೆ, ಆಂತರಿಕ ಗುಣಮಟ್ಟ ಕೋಶ, ಯುವ ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ
ಎಚ್ ಐ ವಿ / ಏಡ್ಸ್ ಕುರಿತು ಅರಿವು ಕಾರ್ಯಾಗಾರವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಇತಿಹಾಸ ವಿಭಾಗದ ಮುಖ್ಯಸ್ಥ ಹಾಲು ಸಿದ್ದಪ್ಪ ರವರು ಉದ್ಘಾಟಿಸಿ ಬಳಿಕ ಮಾತನಾಡಿದರು.
ಹೆಚ್ ಐ ವಿ / ಏಡ್ಸ್ ಬಗ್ಗೆ ಅರಿವು ಹೆಚ್ಚಾದಷ್ಟು ಈ ರೋಗವನ್ನು ತಡೆಗಟ್ಟ ಬಹುದು ಎಂದರು. ಐಸಿಟಿಸಿ ಕೇಂದ್ರ ಸಂಪನ್ಮೂಲಗಳ ವ್ಯಕ್ತಿ ಚಂದ್ರಶೇಖರ್ ಬಿ ಕೆ ಮಾತನಾಡಿ ಹೆಚ್ ಐ ವಿ ಯು ಅಸುರಕ್ಷತೆ ಲೈಂಗಿಕತೆ,ಸೋಂಕಿತ ಸೂಜಿ, ಸಿರಂಜ್ ಹಂಚಿಕೆ, ಗರ್ಭಧಾರಣೆ, ಹೆರಿಗೆ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ ಮತ್ತು ಅಪರೂಪವಾಗಿ ರಕ್ತ ವರ್ಗಾವಣೆಯ ಮೂಲಕ ಹರಡಬಹುದು ಇದರ ಬಗ್ಗೆ ಜಾಗೃತಿ ಇರಲಿ ಹಾಗೂ
ಹೆಚ್ ಐ ವಿ ಹರಡದ ಸಂದರ್ಭಗಳು ಅಂದರೆ ಸೋಂಕಿತ ವ್ಯಕ್ತಿಯ ಜೊತೆಗೆ ಕೈ ಕುಲುಕುವುದರಿಂದ, ಊಟ ಮಾಡುವುದರಿಂದ, ಅವರು ಬಳಸಿದ ಸೋಪಗಳನ್ನು ನಾವು ಬಳಸುವುದರಿಂದ, ಶೌಚಾಲಯ ಅಥವಾ ಈಜುಕೊಳ ಹಂಚುಕೊಳ್ಳುವುದರಿಂದ, ಹಲ್ಲುಹುಜ್ಜುವುದು ಅಪ್ಪಿಕೊಳ್ಳುವುದು ಜೊತೆಗೆ ಸೊಳ್ಳೆ ಕಡಿತದಿಂದ ಹರಡುವುದಿಲ್ಲ. ಇಂದು ಹೆಚ್ ಐ ವಿ ಹೆಚ್ಚು ಹರಡಲು ಪ್ರಮುಖ ಕಾರಣವೆಂದರೆ ಅದು ಸಮೂಹ ಮಾಧ್ಯಮಗಳ ದುರ್ಬಳಕೆ ಇದರಿಂದ ದೂರವಿರಬೇಕು ಹೆಚ್ಚು ಯುವಕರು ಇದಕ್ಕೆ ಬಲಿಯಾಗುತ್ತಿದ್ದಾರೆ . ಪ್ರವಾಸಕ್ಕೆ ಹೋದಾಗ ಜಾಗೃತರಾಗಿರಿ, ಟ್ಯಾಟೋಗಳನ್ನು ಸಂತೇ ಜಾತ್ರೆಗಳಲ್ಲಿ ಹಾಕಿಸುವುದರಿಂದ ಬರುತ್ತದೆ.
ಶಿಕಾರಿಪುರ ತಾಲ್ಲೂಕಿನಲ್ಲಿ ಒಟ್ಟು 4005 ಹೆಚ್ ಐ ವಿ ಪ್ರಕರಣಗಳು ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ
ಎನ್ ಜಿ ಒ ಗಳ ಸಮೀಕ್ಷೆ ಪ್ರಕಾರ ಶಿಕಾರಿಪುರ ತಾಲ್ಲೂಕಿನಲ್ಲಿ 168 ಸಲಿಂಗ ಕಾಮದಿಂದ ಹೆಚ್ ಐ ವಿ ಪ್ರಕರಣಗಳು ದಾಖಲಾಗಿದೆ ಆದರಿಂದ ಯುವ ಸಮೂಹ ಜಾಗೃತರಾಗಬೇಕಾಗಿದೆ. ಇಂದಿನ ಯುವ ಜನತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಶಾಸ್ತ್ರದ ಮುಖ್ಯಸ್ಥರಾದ ಡಾ ರೇಷ್ಮಾ, ಇಂಗ್ಲೀಷ್ ವಿಭಾಗ ಮುಖ್ಯಸ್ಥರಾದ ಸೌಮ್ಯ, ಉಪನ್ಯಾಸಕರಾದ ಡಾ ಗುರುನಾಥ್ ಹೊಂಕಳದ್, ಡಾ ತೇಜಸ್ವಿನಿ, ಈಶ್ವರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Tags:
ಶಿಕಾರಿಪುರ ಸುದ್ದಿ