ಸರಿಗಮಪ ಜೂನಿಯರ್ ಮೆಗಾ ಆಡಿಷನ್‌ಗೆ ಗ್ರಾಮೀಣ ಪ್ರತಿಭೆ ಆಯ್ಕೆ Zee kannada

ಸರಿಗಮಪ ಜೂನಿಯರ್ ಮೆಗಾ ಆಡಿಷನ್‌ಗೆ ಗ್ರಾಮೀಣ ಪ್ರತಿಭೆ ಆಯ್ಕೆ

ಸೊರಬ: ತಾಲೂಕಿನ ಹರೀಶಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ವಿದ್ಯಾನಗರದ 8ನೇ ತರಗತಿ ವಿದ್ಯಾರ್ಥಿನಿ ಕೀರ್ತಿ ಎಸ್ ಅವರು ತಮ್ಮ ಸಂಗೀತ ಪ್ರತಿಭೆಯಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವ ಹೆಜ್ಜೆ ಇಟ್ಟಿದ್ದಾರೆ.

ಜನಪ್ರಿಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ ಜೂನಿಯರ್” ಕಾರ್ಯಕ್ರಮದ 22ನೇ ಸಂಚಿಕೆಯ ಮೆಗಾ ಆಡಿಷನ್‌ಗೆ ಅವರು ಆಯ್ಕೆಯಾಗಿರುವುದು ಸ್ಥಳೀಯವಾಗಿ ಸಂತಸದ ವಾತಾವರಣ ನಿರ್ಮಿಸಿದೆ.

ಕೀರ್ತಿ ಎಸ್ ಅವರು ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದು, ಶಾಲಾ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಸಾಂಸ್ಕೃತಿಕ ವೇದಿಕೆಗಳಲ್ಲಿ ತಮ್ಮ ಗಾಯನದ ಮೂಲಕ ಗಮನ ಸೆಳೆದಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿದ ಗುರುಗಳು ಹಾಗೂ ಪೋಷಕರು ಸದಾ ಪ್ರೋತ್ಸಾಹ ನೀಡಿದ್ದು, ಇದೀಗ ಆ ಪರಿಶ್ರಮಕ್ಕೆ ಫಲ ದೊರೆತಿದೆ.

ಮೆಗಾ ಆಡಿಷನ್‌ಗೆ ಆಯ್ಕೆಯಾಗಿರುವುದು ಕೀರ್ತಿಗೆ ದೊಡ್ಡ ಸಾಧನೆಯಾಗಿದ್ದು, ಮುಂದಿನ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯದ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಕನಸು ಹೊಂದಿದ್ದಾಳೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಇಂತಹ ವೇದಿಕೆಗೆ ಆಯ್ಕೆಯಾಗಿರುವುದು ಇತರ ಮಕ್ಕಳಿಗೂ ಪ್ರೇರಣೆಯಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಕೀರ್ತಿಯ ಸಾಧನೆಯನ್ನು ಅಭಿನಂದಿಸಿ, ಮುಂದಿನ ಹಂತಗಳಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.





Previous Post Next Post