ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ - ತುಂಡಾಗಿ ಬಿದ್ದ ಜಾಹೀರಾತು ನಾಮಫಲಕ tth Rain

ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ - ತುಂಡಾಗಿ ಬಿದ್ದ ಜಾಹೀರಾತು ನಾಮಫಲಕ 

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಸತತವಾಗಿ ಒಂದು ಘಂಟೆಯಿಂದ ಮಳೆಯಾಗುತ್ತಿದ್ದು ಗುಡುಗು ಸಿಡಿಲು ಮಿಂಚಿನ ಆರ್ಭಟದ ಜೊತೆಗೆ ಮಳೆಯಾಗುತ್ತಿದೆ. ಗಾಳಿ ಮಳೆಯ ಅಬ್ಬರಕ್ಕೆ ಆಗುಂಬೆ ಬಸ್ ನಿಲ್ದಾಣ ಸಮೀಪ ಜಾಹೀರಾತು ನಾಮಫಲಕವೊಂದು ತುಂಡಾಗಿ ಬಿದ್ದಿದೆ.

ಆಗುಂಬೆ ಬಸ್ ನಿಲ್ದಾಣದ ಮಾತೃಶ್ರೀ ಎಲೆಕ್ಟ್ರಾನಿಕ್ ಪಕ್ಕದ ಕಟ್ಟಡದ ಮೇಲ್ಭಾಗ ಇದ್ದಂತಹ ಕಬ್ಬಿಣದ ಜಾಹೀರಾತು ನಾಮಫಲಕ ತುಂಡಾಗಿ ಬಿದ್ದಿದೆ. ಯಾವುದೇ ಅವಘಡ ಸಂಭವಿಸಿಲ್ಲ. ಮಾತೃಶ್ರೀ ಎಲೆಕ್ಟ್ರಾನಿಕ್ ಕಟ್ಟಡಕ್ಕೆ ವಾಲಿದಂತೆ ತುಂಡಾಗಿ ಬಿದ್ದಿದೆ. ಒಂದು ವೇಳೆ ಎದುರು ಭಾಗದಲ್ಲಿ ಬಿದ್ದಿದ್ದರೆ ರಸ್ತೆಗೆ ಬೀಳುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಗಾಳಿ ಮಳೆಯ ಆರ್ಭಟದ ಜೊತೆಗೆ ಗುಡುಗು ಸಿಡಿಲಿನ ಆರ್ಭಟ ಕೂಡ ಜೋರಾಗಿದೆ...





Previous Post Next Post