ಬೆಜ್ಜವಳ್ಳಿಯಲ್ಲಿ ಕಾರು ಗುದ್ದಿ ವ್ಯಕ್ತಿ ಸಾವು..!
ತೀರ್ಥಹಳ್ಳಿ : ನೆಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊರ್ವನಿಗೆ ಕಾರೊಂದು ಗುದ್ದಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಜ್ಜವಳ್ಳಿಯ ಸಮಕಾನಿ ಸಮೀಪ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಸುಂದರೇಶ್ ( 63 ವರ್ಷ ) ಎಂದು ಗುರುತಿಸಲಾಗಿದ್ದು ದಾನಸಾಲೆಯವರು ಎಂದು ತಿಳಿದುಬಂದಿದೆ. ಕಾರು ಪುನಾದಿಂದ ಬಂದಿದ್ದು ಎಂದು ಹೇಳಲಾಗುತ್ತಿದೆ. ಊರಿಗೆ ಬಂದವರು ನಿಯಂತ್ರಣ ತಪ್ಪಿ ಗುದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕಾರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Tags:
ಅಪಘಾತ ಸುದ್ದಿ