ಹೊರಗಡೆ ನಿಲ್ಲಿಸಿದ್ದ ಸ್ಕೂಟಿಯಲ್ಲಿ ನಾಗರಹಾವು ಪತ್ತೆ..! snake

ಹೊರಗಡೆ ನಿಲ್ಲಿಸಿದ್ದ ಸ್ಕೂಟಿಯಲ್ಲಿ ನಾಗರಹಾವು ಪತ್ತೆ..!

ಶಿವಮೊಗ್ಗ :  ನಿಲ್ಲಿಸಿದ್ದ ಸ್ಕೂಟಿ ದ್ವಿಚಕ್ರ ವಾಹನದಲ್ಲಿ ಅಡಗಿದ್ದ ನಾಗರಹಾವನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸಂರಕ್ಷಿಸಿದ ಘಟನೆ, ಶಿವಮೊಗ್ಗ ನಗರದ ಕೆಇಬಿ ವೃತ್ತದಲ್ಲಿರುವ ಜಲ ಮಂಡಳಿ ಕಚೇರಿ ಆವರಣದಲ್ಲಿ  ನಡೆದಿದೆ. 

ಕಚೇರಿ ಸಿಬ್ಬಂದಿಯೋರ್ವರಿಗೆ ಸದರಿ ದ್ವಿ ಚಕ್ರ ವಾಹನ ಸೇರಿದ್ದಾಗಿದೆ. ಕಳೆದ ಕೆಲ ದಿನಗಳಿಂದ ಜಲ ಮಂಡಳಿ ಕಚೇರಿ ಸುತ್ತಮುತ್ತ ಹಾವೊಂದು ಓಡಾಡುತ್ತಿರುವುದನ್ನು ಕಚೇರಿಯ ಕೆಲ ಸಿಬ್ಬಂದಿಗಳು ಗಮನಿಸಿದ್ದಾರೆ. 

ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಸದರಿ ಹಾವು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಕಚೇರಿ ಸಿಬ್ಬಂದಿಗಳು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ.  ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ರವರು, ಸ್ಕೂಟಿಯ ಫುಟ್ ಬೋರ್ಡ್ ಕೆಳಭಾಗದಲ್ಲಿ ಅಡಗಿದ್ದ ಸುಮಾರು 2 ಅಡಿ ಉದ್ದದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸುವಲ್ಲಿ ಸಫಲರಾಗಿದ್ದಾರೆ. 





Previous Post Next Post