ಕುಟುಂಬದಲ್ಲಿ ಮನಸ್ತಾಪ - ಕೀಟನಾಶಕ ಸೇವಿಸಿದ ವ್ಯಕ್ತಿ..!
ತೀರ್ಥಹಳ್ಳಿ : ಕುಟುಂಬದಲ್ಲಿ ಮನಸ್ತಾಪ ಆದ ಹಿನ್ನಲೆಯಲ್ಲಿ ಕೀಟನಾಶಕ (ತೋಟಕ್ಕೆ ಹೊಡೆಯುವ ಔಷಧಿಯನ್ನು ) ಕುಡಿದು ಆತ್ಮಹತ್ಯೆಗೆ ವ್ಯಕ್ತಿಯೊರ್ವ ಯತ್ನಿಸಿದ ಘಟನೆ ಗುತ್ತಿಯಡೆಹಳ್ಳಿ ಸಮೀಪದ ಉಬ್ಬುರು ಗ್ರಾಮದಲ್ಲಿ ನಡೆದಿದೆ.
ಪೂರ್ಣೇಶ್ (42 ವರ್ಷ) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪೂರ್ಣೇಶ್ ಪತ್ನಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ತಕ್ಷಣವೇ 112 ವಾಹನ ಸ್ಥಳಕ್ಕೆ ಹೋದಾಗ ಕೀಟನಾಶಕ ಸೇವಿಸಿರುವುದು ತಿಳಿದಿದೆ. ತಕ್ಷಣವೇ ಪೊಲೀಸ್ ವಾಹನದಲ್ಲೇ ಕನ್ನಂಗಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪೂರ್ಣೇಶ್ ಸ್ಥಿತಿ ಗಂಭೀರವಾಗಿದ್ದು 24 ಗಂಟೆಗಳ ಕಾಲ ಏನು ಹೇಳಲು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಮಂಜುನಾಥ್ ಹಾಗೂ 112 ಚಾಲಕರಾದ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
Tags:
ಆತ್ಮಹತ್ಯೆ ಸುದ್ದಿ