ಶಿವಮೊಗ್ಗದಲ್ಲಿ ಮಹಿಳಾ ದಿನಾಚರಣೆಯ ವಿಶೇಷ - ಪ್ರಶಸ್ತಿಗಳನ್ನು ಬಾಚಿಕೊಂಡ ತೀರ್ಥಹಳ್ಳಿ ಮಹಿಳೆಯರು Womens day

ಶಿವಮೊಗ್ಗದಲ್ಲಿ ಮಹಿಳಾ ದಿನಾಚರಣೆಯ ವಿಶೇಷ - ಪ್ರಶಸ್ತಿಗಳನ್ನು ಬಾಚಿಕೊಂಡ ತೀರ್ಥಹಳ್ಳಿ ಮಹಿಳೆಯರು

ಶಿವಮೊಗ್ಗ: ಮಹಿಳೆಯರ ಚಿತ್ರಕಲೆಯಲ್ಲಿ ಪ್ರಕೃತಿಯ ಸೊಬಗು ಅನಾವರಣಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸ್ಪರ್ಧೆಗಳು ಮಹಿಳೆಯರಲ್ಲಿ ಸುಪ್ತವಾಗಿ ಅಡಗಿರುವ ಕಲೆ ಮತ್ತು ಕೌಶಲ್ಯಕ್ಕೆ ಉತ್ತಮ ವೇದಿಕೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಅವರು ತಿಳಿಸಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ‘ಪ್ರಕೃತಿ’ ವಿಷಯದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರಕಲೆ ಕೇವಲ ಕಲೆಯಾಗಿ ಉಳಿಯದೆ ಮನಸ್ಸಿಗೆ ಆನಂದ ನೀಡುವ ಮಾರ್ಗವಾಗಿದೆ. ಆಸಕ್ತರು ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದರು.

ಚಿತ್ರಕಲಾ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯ ಒಟ್ಟು 74 ಮಹಿಳಾ ಸ್ಪರ್ಧಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಪ್ರತಿ ಸ್ಪರ್ಧಿಗೆ 2×2.5 ಅಳತೆಯ ಕ್ಯಾನ್ವಾಸ್ ಒದಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ವಿವಿಧ ಅಧಿಕಾರಿಗಳು ಮತ್ತು ಕಲಾ ಆಸಕ್ತರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಅತ್ಯುತ್ತಮ ಕಲೆ ಪ್ರದರ್ಶಿಸಿದವರಿಗೆ ನಗದು ಬಹುಮಾನ ವಿತರಿಸಲಾಯಿತು.

ಪ್ರಥಮ ಬಹುಮಾನ (₹8,000): ಪ್ರಕೃತಿ ಶೆಣೈ, ತೀರ್ಥಹಳ್ಳಿ.
ದ್ವಿತೀಯ ಬಹುಮಾನ (₹6,000): ಭಾವನಾ ಹೊಳ್ಳ, ತೀರ್ಥಹಳ್ಳಿ.
ತೃತೀಯ ಬಹುಮಾನ (₹4,000): ಆಶಾ ಉಮೇಶ್, ತೀರ್ಥಹಳ್ಳಿ.
ಸಮಾಧಾನಕರ ಬಹುಮಾನ (ತಲಾ ₹2,000): ಹೇಮಲತಮ್ಮ (ಶಿಕಾರಿಪುರ), ಮನ್ವಿತಾ ಆರ್. (ಶಿವಮೊಗ್ಗ), ಶಾಲಿನಿ ನಾಯಕ್ (ಆನವಟ್ಟಿ).
ವಿಶೇಷ ಬಹುಮಾನ: ಸೌಜನ್ಯ ಆರ್. ಕೆ., ಶಿವಮೊಗ್ಗ.








Previous Post Next Post