ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ ವತಿಯಿಂದ ಬೇಸಿಗೆ ಶಿಬಿರ Summer Camp

ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ ವತಿಯಿಂದ ಬೇಸಿಗೆ ಶಿಬಿರ


ಶಿವಮೊಗ್ಗ: ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ ವತಿಯಿಂದ 12ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. 

ಈ ಶಿಬಿರವು ಏಪ್ರಿಲ್ 1ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ನುರಿತ ಹಾಗೂ ಅನುಭವಿ ತರಬೇತುದಾರರಾದ ಶ್ರೀ ಪಿ.ವಿ. ನಾಗರಾಜ್ ಹಾಗೂ ಹಿರಿಯ ಕ್ರೀಡಾಪಟುಗಳ ನೇತೃತ್ವದಲ್ಲಿ ಶಿಬಿರವನ್ನು ನಡೆಸಲಾಗುತ್ತದೆ. 

ಈ ತರಬೇತಿ ಶಿಬಿರವು 10 ರಿಂದ 19 ವರ್ಷದೊಳಗಿನ ಬಾಲಕರು ಹಾಗೂ ಬಾಲಕಿಯರಿಗೆ ಆಯೋಜಿಸಲಾಗಿದೆ. ಅಕಾಡೆಮಿಯಲ್ಲಿ ತರಬೇತಿ ಪಡೆದ ಅನೇಕ ಯುವಕರು ಹಾಗೂ ಯುವತಿಯರು ಜಿಲ್ಲೆ, ವಿಭಾಗ, ರಾಜ್ಯ, ರಾಷ್ಟ್ರ ಮಟ್ಟ ಹಾಗೂ ಅಂತರ ವಿಶ್ವವಿದ್ಯಾಲಯ ಮತ್ತು KSCA ಲೀಗ್ ತಂಡಗಳಲ್ಲಿ ಆಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ

ಶಿಬಿರದ ಅವಧಿಯಲ್ಲಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ, ವರ್ಷಪೂರ್ತಿ ನಡೆಯುವ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ.
ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಪಿ.ವಿ. ನಾಗರಾಜ್ (ತರಬೇತುದಾರರು)
📞 9964599936.ಅಥವಾ ಪ್ರತಿದಿನ ಬೆಳಿಗ್ಗೆ 6:30 ರಿಂದ 8:30 ರವರೆಗೆ ಹಾಗೂ ಸಂಜೆ 4:30 ರಿಂದ 6:30 ರವರೆಗೆ ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ, ಸಹ್ಯಾದ್ರಿ ಕಾಲೇಜ್ ಕ್ರೀಡಾಂಗಣದಲ್ಲಿ ಸಂಪರ್ಕಿಸಬಹುದು.

ಸಹ್ಯಾದ್ರಿ ಕ್ರಿಕೆಟ್ ಅಕಾಡಮಿಯಿಂದ ಕಲಿತು ಸಾಧನೆ ಮಾಡಿದವರು 👇

ಶ್ರಯಶ್ ಮೂವಾ  -  ಕೆನಾಡ
ಆದಿ ಹೆಗಡೆ - ಸ್ಕಾಟ್ ಲ್ಯಾಂಡ್
ಲೋಹಿತ್ ಎಸ್ - U 19 ಕರ್ನಾಟಕ ತಂಡ
ಅದಿತಿ ರಾಜೇಶ್ - ಕರ್ನಾಟಕ ತಂಡ
ಇಂಚರ ಅಂಡರ್ - U 15  
ನಿರ್ಮಿತ ಎಂಜೆ - U 19 ಕರ್ನಾಟಕ
ಧನ್ಯ ಗೌಡ -  ಕರ್ನಾಟಕ
ಶ್ರೀಲಕ್ಷ್ಮಿ-   ಕರ್ನಾಟಕ 
ಸಂಧ್ಯಾ-   ಕರ್ನಾಟಕ ಟೀಂ












Previous Post Next Post