ತೋಟದ ಮಧ್ಯೆ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃ*ತದೇ*ಹ ಪತ್ತೆ..!
ಶಿವಮೊಗ್ಗ : ತೋಟದ ಮಧ್ಯೆ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಹೊಳೆಹೊನ್ನೂರು ಸಮೀಪ ನಡೆದಿದೆ.
ಉಪನ್ಯಾಸಕ ಸುರೇಶ್ (58) ಮೃತ ದುರ್ದೈವಿ..ಬೆಂಕಿ ಹೊತ್ತಿ ಉರಿಯುವ ಸ್ಥಿತಿಯಲ್ಲಿ ಉಪನ್ಯಾಸಕನ ಶವ ಪತ್ತೆಯಾಗಿದೆ.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಹನುಮಂತಾಪುರ ಗ್ರಾಮದ ತೋಟದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಉಪನ್ಯಾಸಕ ಸಾವನ್ನಪ್ಪಿದ್ದಾರೆ.
ಬೆಳಗ್ಗೆ ತಮ್ಮದೇ ತೋಟದಲ್ಲಿ ಹೊತ್ತಿ ಉರಿಯುವ ಸ್ಥಿತಿಯಲ್ಲಿ ಸುರೇಶ್ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ ಅಥವಾ ಆತ್ಮಹತ್ಯೆ ಎನ್ನುವ ಕುರಿತು ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.
ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುರೇಶ್ ಕಾರ್ಯನಿರ್ವಹಿಸುತ್ತಿದ್ದರು.
Tags:
ಶಿವಮೊಗ್ಗ ಸುದ್ದಿ