ತೀರ್ಥಹಳ್ಳಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ tth

ತೀರ್ಥಹಳ್ಳಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ

ಹೆಲ್ಮೆಟ್ ಹಾಕದೇ ಪೇಟೆಗೆ ಬರ್ತೀರಾ? ಬೇಕಾಬಿಟ್ಟಿ ವಾಹನ ನಿಲ್ಲಿಸ್ತೀರಾ …? ಹಾಗಾದ್ರೆ ದಂಡ ಕಟ್ಟೋಕೆ ರೆಡಿ ಆಗಿ

ತೀರ್ಥಹಳ್ಳಿ: ಪೇಟೆಗೆ ಬರ್ಬೇಕು, ಹೆಲ್ಮೆಟ್ ಹಾಕಿಲ್ಲ, ಮರೆತು ಹೋಯ್ತು,  ಪೊಲೀಸ್ ಕಾಣೋದೇ ಇಲ್ಲ… ತಪ್ಪಿಸ್ಕೊಂಡು ಹೋಗೋಣ, ಅಂತ  ಬೈಕ್ ತಂದು ಬೇಕಾಬಿಟ್ಟಿ ವಾಹನ ನಿಲ್ಲಿಸಿದ್ರೆ ದಂಡ ಕಟ್ಟೋಕೆ ರೆಡಿ ಇರ್ಬೇಕು ಅಷ್ಟೇ.  ಇನ್ಮುಂದೆ ಸಂಪೂರ್ಣ ಆನ್ಲೈನ್ ವ್ಯವಸ್ಥೆ ಆಗಿದ್ದು ನಿಮ್ಮ ಮೊಬೈಲ್ ಗೆ ದಂಡದ ರಶೀದಿ ತಲುಪಲಿದೆ.

ಇಲ್ಲಿಯವರೆಗೆ ರಸ್ತೆಯಲ್ಲೇ ತಡೆದು ದಂಡ ಹಾಕುತ್ತಿದ್ದರು. ಈಗ ಫೋಟೋ ತೆಗೆದುಕೊಂಡು ಆನ್ಲೈನ್ ಮೂಲಕ   ನೇರವಾಗಿ ನಿಮ್ಮ ಮೊಬೈಲ್‌ಗೆ  ಸಂದೇಶ ಬರುತ್ತದೆ. ಅದನ್ನು ತೆರೆಯುತ್ತಿದ್ದಂತೆಯೇ “ಸಂಚಾರ ನಿಯಮ ಉಲ್ಲಂಘನೆ – ದಂಡ ಪಾವತಿಸಿ” ಎಂಬುದಾಗಿ ತೋರಿಸುತ್ತದೆ.

ಪಟ್ಟಣದ ರಸ್ತೆಗಳ ಬಳಿ ಪೊಲೀಸ್ ಸಿಬ್ಬಂದಿ ಸುಮ್ಮನೆ ನಿಂತಿರುವಂತೆ ಕಾಣಬಹುದು. ಆದರೆ ಅವರ ಕೈಯಲ್ಲಿರುವ ಮೊಬೈಲ್ ಫೋನ್ ಕ್ಯಾಮೆರಾ ಕೆಲಸ ಮಾಡ್ತಾ ಇರುತ್ತದೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಾ ಬಂದರೆ, ಮೂವರು ಕೂತು ಸವಾರಿ ಮಾಡ್ತಾ ಬಂದರೆ ಅಥವಾ ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುತ್ತಾ ಬಂದರೆ ದಂಡ ಕಟ್ಟೋಕೆ ತಯಾರಾಗಿರಬೇಕು...

ಇಲ್ಲಿಯವರೆಗೆ ರಸ್ತೆಯಲ್ಲಿ ವಾಹನ ನಿಲ್ಲಿಸಿ “ಸಾರ್ ಹೆಲ್ಮೇಟ್ ಮನೆಯಲ್ಲಿದೆ ಬಿಡಿ”, ಮಕ್ಕಳನ್ನು ಶಾಲೆಗೆ ಬಿಡೋಕೆ ಬಂದಿದ್ದೆ,  “ಹಿಂಗೇ ಹಾಲು ತಗೋಳೊಕೆ ಬಂದೆ ಸರ್ ” , ನಾನ್ಯಾರು ಗೊತ್ತಾ? ಅವ್ರಿಗೆ ಪೋನ್ ಮಾಡ್ಲಾ ? ,  “ಇದೊಂದ್ ಸಲ ಸಲ ಬಿಟ್ಬಿಡಿ ”, ಎಂಬ ಮಾತಿಗೆ ಈಗ ಅವಕಾಶವೇ ಇಲ್ಲ .. ಪೊಲೀಸ್ ಸಿಬ್ಬಂದಿಗೂ ಕಿರಿಕಿರಿ ಕಡಿಮೆ, ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುವುದು, ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುವುದು, ನಿಷಿದ್ಧ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು ಇಂತಹ ತಪ್ಪುಗಳಿಗೆ ಕನಿಷ್ಠ 500 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ಪಟ್ಟಣಕ್ಕೆ ಬರೋ ಮೊದಲು ಗಾಡಿ ಸ್ಟಾರ್ಟ್ ಮಾಡುವ ಮೊದಲು ಹೆಲ್ಮೆಟ್ ಹಾಕಿಕೊಳ್ಳಿ.  ಪೊಲೀಸ್ ಕಂಡಿಲ್ಲ ಅಂತ ಹೋಗಬೋದು ಆದ್ರೆ ಪೊಲೀಸ್ ಗೆ ನೀವ್ ಕಾಣ್ಸಿದ್ರೆ ಮೊಬೈಲ್‌ನಲ್ಲಿ ದಂಡ ಕಟ್ಟಲು ಮೆಸೇಜ್  ಬರೋದು ಗ್ಯಾರಂಟಿ.....







Previous Post Next Post