ಕುಟುಂಬದವರ ಜೊತೆಗೆ ಮಾತನಾಡಿ ಮಲಗಲು ತೆರಳಿದ್ದ ಯುವಕ ನೇಣಿಗೆ ಶರಣು..!
ರಿಪ್ಪನ್ ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುನಿಲ್ (23 ವರ್ಷ) ಆತ್ಮಹತ್ಯೆಗೆ ಶರಣಾದ ಯುವಕ..
ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಯುವಕ, ರಾತ್ರಿ ಸಹೋದರರೊಂದಿಗೆ ಮಾತನಾಡಿ ಊಟ ಮುಗಿಸಿ ಮಲಗಲು ತೆರಳಿದ್ದಾನೆ. ತಡರಾತ್ರಿ ಗಮನಿಸಿದಾಗ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಮೃತರಿಗೆ ಅಪ್ಪ, ಅಮ್ಮ, ಅಣ್ಣ ಇದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
ಆತ್ಮಹತ್ಯೆ ಸುದ್ದಿ