ರೋಟರಿ ತೀರ್ಥಹಳ್ಳಿಯಿಂದ ಅಂತರಾಷ್ಟ್ರೀಯ
ಮಹಿಳಾ ದಿನಾಚರಣೆ
ತೀರ್ಥಹಳ್ಳಿ : ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಕಾನೂನಿನ ಬಲವನ್ನು ಹೆಚ್ಚಿಸುವುದು ಮತ್ತು ಸುಧಾರಿಸುವುದು ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಸಾಕಷ್ಟು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವುದು ಮಹಿಳಾ ಸಬಲೀಕರಣ ಎಂದು ಕರೆಯಲಾಗುವುದು ಎಂದು ಸುಷ್ಮಾ ಪಿಎಸ್‌ಐ ತಿಳಿಸಿದರು.
ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಮಹಿಳಾ ಉದ್ಯೋಗಿಗಳು ತಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಅವರಿಗೆ ಸಿಗುವ ಗೌರವವು ಹೆಚ್ಚಿನದಾಗಿರುತ್ತದೆ ಮತ್ತು ಬೇರೆಯವರಿಗೆ ಮಾದರಿಯಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಷ್ಮಾ ಪಿಎಸ್‌ಐ, ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಕರ್ತವ್ಯ, ಶೋಭಾಬಾಯಿ, ಆರೋಗ್ಯ ಇಲಾಖೆಯಲ್ಲಿ ಪ್ರಶಂಸನೀಯ ಕೆಲಸ, ಲಕ್ಷ್ಮಮ್ಮ ಪೌರ.ಕಾರ್ಮಿಕರಾಗಿ ನಿರಂತರ ಕೆಲಸ, ನಯನ ಜೆ ಶೆಟ್ಟಿ ಸಮುದಾಯ ಸೇವೆ ಮತ್ತು ಜ್ಯೋತಿ ದಿಲೀಪ್ ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದಕ್ಕೆ ಅವರನ್ನು ರೋಟರಿ ಕ್ಲಬ್ ತೀರ್ಥಹಳ್ಳಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಮಹಿಳಾ
ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಜ್ಯೋತಿ ದಿಲೀಪ್, ನಯನ ಜೆ ಶೆಟ್ಟಿ, ಪ್ರತಿಮಾ, ನೇತ್ರ ಜಗದೀಶ್ ಮತ್ತು ಆಶಾ ಡೇನಿಯಲ್ ಇವರು ಬಹುಮಾನಗಳನ್ನು ಪಡೆದರು.
ಸಭೆಯ ಅಧ್ಯಕ್ಷತೆಯನ್ನು ಪಿ ವಿ ಭರತ್ ಕುಮಾರ್, ಅಧ್ಯಕ್ಷರು, ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ವಹಿಸಿದ್ದರು.
ಸನ್ಮಾನಿತರ ಪರಿಚಯವನ್ನು ಅನಿಲ್ ಕುಮಾರ್, ನಿಕಟಪೂರ್ವ ಅಧ್ಯಕ್ಷರು ಮತ್ತು ಯುವರಾಜ್ ಎಸ್, ಮಾಜಿ ಅಧ್ಯಕ್ಷರು ಇವರು ಸಭೆಗೆ ಪರಿಚಯಿಸಿದರು. ವೇದಿಕೆಯಲ್ಲಿ ಭರತ್ ಕುಮಾರ್ ಕೋಡು, ವಲಯ ಸೇನಾನಿ ಉಪಸ್ಥಿತರಿದ್ದರು.
Tags:
ತೀರ್ಥಹಳ್ಳಿ ಸುದ್ದಿ