ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ - ಧರೆಗುರುಳಿದ ಮರ - ಟ್ರಾಫಿಕ್ ಜಾಮ್
ತೀರ್ಥಹಳ್ಳಿ : ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಮಳೆರಾಯ ತಂಪೆರದಿದ್ದರೆ ಇನ್ನೊಂದಡೆ ಮಳೆಯ ಆರ್ಭಟಕ್ಕೆ ಮರ ಧರೆಗುರುಳಿದ ಘಟನೆ ಬಾಳೆಬೈಲು ಸಮೀಪ ನಡೆದಿದೆ.
ಬಾಳೆಬೈಲಿನ ಕವಿತಾ ಹೋಟೆಲ್ ಮುಂಭಾಗ ಮರವೊಂದು ಧರೆಗುರುಳಿದ್ದು ರಸ್ತೆಗೆ ಮರ ಬಿದ್ದಿದೆ. ಇದರ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಮರದ ಜೊತೆಗೆ ವಿದ್ಯುತ್ ಲೈನ್ ಸಹ ಬಿದ್ದಿದೆ ಎಂದು ಹೇಳಲಾಗುತ್ತಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ಎಚ್ಚರಿಯಿಂದ ಓಡಾಡಬೇಕಿದೆ. ಒಟ್ಟಿನಲ್ಲಿ ಕಳೆದ ಒಂದು ಘಂಟೆಯಿಂದ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ತೊಂದರೆ ಉಂಟಾಗಿದೆ..
Tags:
ಮಳೆ