ತೀರ್ಥಹಳ್ಳಿಯಲ್ಲಿ ಗುಡುಗು ಸಿಡಿಲು ಸಹಿತ ಮಳೆ Rain

ತೀರ್ಥಹಳ್ಳಿಯಲ್ಲಿ ಗುಡುಗು ಸಿಡಿಲು ಸಹಿತ ಮಳೆ 

ತೀರ್ಥಹಳ್ಳಿ : ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಜನತೆಗೆ ಮಳೆರಾಯ ಕೊಂಚ ಮಟ್ಟಿಗೆ ತಂಪೆರೆದಿದ್ದಾನೆ. ಮಳೆಗಿಂತ ಗುಡುಗು ಸಿಡಿಲು ಹಾಗೂ ಮಿಂಚಿನ ಆರ್ಭಟ ಹೆಚ್ಚಾಗಿದೆ.

ಕಳೆದ ಮೂರ್ನಾಲ್ಕು ದಿನದ ಹಿಂದೆ ಸಂಜೆ ವೇಳೆ ಮಳೆ ಆಗಿತ್ತು. ಆದರೆ ಇಂದು ಮಳೆಗಿಂತ ಗುಡುಗು ಸಿಡಿಲಿನ ಆರ್ಭಟ ಜೋರಾಗಿದೆ. ಶಿವಮೊಗ್ಗದಲ್ಲೂ ಸಂಜೆ ವೇಳೆ ಮಳೆಯಾಗಿದ್ದು ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. 
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ..



Previous Post Next Post