ಹಿರೇಗದ್ದೆ ಪಿಎಂಶ್ರೀ ಶಾಲೆಯಲ್ಲಿ ಶಾರದಾ ಪೂಜೆ - ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ತೀರ್ಥಹಳ್ಳಿ: ತಾಲೂಕಿನ ಆರಗ ಗ್ರಾಮಪಂಚಾಯಿತಿ ಹಿರೇಗದ್ದೆ ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ ಮಾ.20ರ ಶುಭ ಶುಕ್ರವಾರದಂದು ಸರಸ್ವತಿ ( ಶಾರದಾ ) ಪೂಜೆಗ ನೆರವೇರಿದವು. ವಿದ್ಯಾಧಿದೇವತೆ ಸ್ವರಸ್ವತಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ ಮಕ್ಕಳನ್ನು ಶಾಲಾ ಶಿಕ್ಷಕ ವೃಂದದವರು ಶುಭ ಹಾರೈಸಿದರು.
ಶಾರದಾ ಪೂಜೆಯ ಜೊತೆಗೆ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಅತಿಥಿ ಶಿಕ್ಷಕರಾದ ಮಾಲತಿ ಅವರಿಗೆ ಸೀಮಂತ ಕೂಡ ಮಾಡಲಾಯಿತು.
ಈ ವೇಳೆ ಶಾಲೆಯ ಮುಖ್ಯಶಿಕ್ಷಕರಾದ ಲೀಲಾವತಿ ಮಾತನಾಡಿ ನಿರಂತರ ಅಧ್ಯಯನದಿಂದ ಮಾತ್ರ ಸರಸ್ವತಿಯನ್ನು ನಾವು ಒಲಿಸಿಕೊಳ್ಳಲು ಸಾಧ್ಯ. ಸರಸ್ವತಿ ಒಲಿದ ಮಕ್ಕಳನ್ನು ನಾವು ಸರಸ್ವತಿ ಪುತ್ರರೆಂದೇ ಬಿರುದು ನೀಡುತ್ತೇವೆ. ಮಕ್ಕಳೇ ನಮ್ಮ ದೇಶದ ನಿಜವಾದ ಸಂಪತ್ತು ಎಂದರು.
ಎಸ್‌ಡಿಎಂಸಿ ಅಧ್ಯಕ್ಷರಾದ ಉಮೇಶ್ ಮಾತನಾಡಿ, ಶಾಲಾ ದಿನಗಳೇ ಮಾನವನ ಜೀವನದ ಅಮೂಲ್ಯ ಕ್ಷಣಗಳು ಇಂತಹ ದಿನಗಳನ್ನು ಮಕ್ಕಳು ಅನುಭವಿಸಿ ಉನ್ನತ ಶಿಕ್ಷಣದತ್ತ ಮುಖಮಾಡುತ್ತಿದ್ದೀರಿ ಆದ ಕಾರಣ ಮುಂದಿನ ದಿನಗಳಲ್ಲಿಯೂ ಶ್ರದ್ದೆಯಿಂದ ಉನ್ನತ ಶಿಕ್ಷಣ ಮುಗಿಸಿ ಭವಿಷ್ಯ ರೂಪಿಸಿಕೊಳ್ಳಿ ಎಂದು ಹಾರೈಸಿದರು.
ಶಾರದಾ ಪೂಜೆ ಪ್ರಯುಕ್ತ ಮಕ್ಕಳಿಗೆ ವಿಶೇಷ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಟನೇ ತರಗತಿಯ ಮಕ್ಕಳು ತಮ್ಮ ಬೀಳ್ಕೊಡುಗೆ ಸಂದರ್ಭದಲ್ಲಿ ಶಾಲೆಗೆ 18 ಕೆಜಿ ಅನ್ನ ಮಾಡುವ ಪಾತ್ರೆಯನ್ನು ನೀಡಿ ಇಲ್ಲಿಯವರೆಗೆ ಶಾಲೆಯಲ್ಲಿ ಮಾಡಿದ ಚೇಷ್ಟೆ, ಆಟ ಪಾಠದ ಸವಿವರವಾದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಜಯಂತಿ, ಶಾಲೆಯ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.
Tags:
ಹಿರೇಗದ್ದೆ ಶಾಲೆ