ಕಿಮ್ಮನೆ ರತ್ನಾಕರ್ ವಿರುದ್ಧ ಫೇಸ್‌ಬುಕ್ ನಲ್ಲಿ ಮಾನ
ಹಾನಿಕಾರಕವಾಗಿ ಕಾಮೆಂಟ್ - ದೂರು ದಾಖಲಿಸಿದ ಯುವ ಕಾಂಗ್ರೆಸ್
ತೀರ್ಥಹಳ್ಳಿ : ಮಾ. 17 ರಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಕೇಂದ್ರ ಬಿಜೆಪಿ ಆಡಳಿತದ ವಿರುದ್ಧ ಗ್ಯಾಸ್ ಬೆಲೆ ಏರಿಕೆ ಮತ್ತು ಶಾಸಕ ಆರಗ ಜ್ಞಾನೇಂದ್ರ ಅವರ ವಿರುದ್ಧ ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು. ಪತ್ರಿಕಾಗೋಷ್ಠಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿತ್ತು.
ಪತ್ರಿಕಾಗೋಷ್ಠಿಯ ವಿಡಿಯೋವನ್ನು ಅತೀ ಹೆಚ್ಚು ಜನ ವೀಕ್ಷಿಸಿದ್ದು, ಆ ಪೈಕಿ ಗಣಪು ಭಟ್ ಗಣಪತಿ
(GANAPUU BHT GANPATI) ಎನ್ನುವ FB ಖಾತೆದಾರರು ಪ್ರತಿಕ್ರಿಸಿದ್ದು ಪ್ರತಿಕ್ರಿಯಿಸುವ ಬರದಲ್ಲಿ
ಹೇ ಲೋ**, *ವರ್ಸಿ, **ಮಗನೇ ಮೋದಿ ಬಗ್ಗೆ ಮಾತಾಡಕ್ಕೆ ನಿಂಗೆ ಏನು ಯೋಗ್ಯತೆ ಇದೆ. ನೀನು ನಮ್ಮ ಕ್ಷೇತ್ರದಲ್ಲಿ ಏನು ಕಿಸ್ತಿದಿಯಾ ***ಮಗನೆ" ಎಂದು ಉದ್ದೇಶ ಪೂರಕವಾಗಿ ಕೆಪಿಸಿಸಿ ವಕ್ತಾರರಾದ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿರುವ ಕಿಮ್ಮನೆ ರತ್ನಾಕರವರ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿಕಾರಕವಾಗಿ ವಿಕೃತವಾಗಿ ಪ್ರತಿಕ್ರಿಯಿಸಿರುತ್ತಾರೆ .
ಈ ಪ್ರತಿಕ್ರಿಯೆಯಿಂದಾಗಿ ತೀರ್ಥಹಳ್ಳಿ ಕ್ಷೇತ್ರದ ಹಾಗೂ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ಆಘಾತವಾಗಿದ್ದು, ಈ ವ್ಯಕ್ತಿಯ ವಿರುದ್ಧ (GANAPUU BHT GANPATI) ಕಾನೂನು ರೀತಿಯ ಕ್ರಮ ಕೈಗೊಂಡು ಸಾಮಾಜಿಕ ಜಾಲತಾಣದಲ್ಲಿ ಆ ವ್ಯಕ್ತಿಯು ನೀಡಿದ ಪ್ರತಿಕ್ರಿಯೆಯನ್ನು ಅಳಿಸಿ ಕಿಮ್ಮನೆ ರತ್ನಾಕರ್ ರವರ ಅನುಯಾಯಿಗಳಾದ ನಮಗೆ ನ್ಯಾಯ ಒದಗಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ..