ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಂದ್..! ಸಾರ್ವಜನಿಕರ ಪರದಾಟ... Taluk Office

ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಂದ್..! ಸಾರ್ವಜನಿಕರ ಪರದಾಟ...

ತೀರ್ಥಹಳ್ಳಿ : ದಿನ ನಿತ್ಯ ಸಾವಿರಾರು ಮಂದಿ ತಮ್ಮ ಕೆಲಸ
ಕಾರ್ಯಗಳಿಗೆ ತಾಲೂಕು ಕಚೇರಿಗೆ ಆಗಮಿಸುತ್ತಾರೆ. ಕೆಲಸ
ಕಾರ್ಯಗಳ ಒತ್ತಡ ನಿವಾರಣೆಗಾಗಿ ಇದ್ದಂತಹ ಒಂದು ನೀರಿನ ವ್ಯವಸ್ಥೆಯನ್ನು ಕೂಡ ಬಂದ್ ಮಾಡಿರುವುದು ಯಾಕೆ ಎಂಬ ಪ್ರೆಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಅಧಿಕಾರಿಗಳಿಗೆ ನೀರಿನ ಅವಶ್ಯಕತೆ ಇಲ್ಲದೆ ಇರಬಹುದು
ಅಥವಾ ಅವರು ನೀರಿಗೆ ಬೇರೆ ವ್ಯವಸ್ಥೆ ಮಾಡಿಕೊಂಡಿರಬಹುದು ಆದರೆ ದೂರದ ಊರಿನಿಂದ
ಆಗಮಿಸುವ ಸಾರ್ವಜನಿಕರಿಗೆ ಕುಡಿಯಲು ನೀರು ಬೇಕು
ಎಂದರೆ ಪಟ್ಟಣದ ಒಳಗೆ ಹೋಟೆಲ್ ಗಳಿಗೆ ಹೋಗಬೇಕಾದ
ಪರಿಸ್ಥಿತಿ ಇದೆ. ಅಧಿಕಾರಿಗಳು ಕಾಫಿ, ಜ್ಯೂಸ್ ಎಂದು ಮಧ್ಯದಲ್ಲೇ ತೆರಳುತ್ತಾರೆ. ಆದರೆ ಕೆಲಸಕ್ಕಾಗಿ ಒದ್ದಾಟ ನಡೆಸುವ ಸಾರ್ವಜನಿಕರ ಪರಿಸ್ಥಿತಿ ಏನಾಗಬೇಕು? ಬೆಳಗ್ಗೆ ಬಂದರೆ ಕೆಲವೊಂದು ಬಾರಿ ಕೆಲಸ ಮುಗಿಯುವಾಗ ಸಂಜೆ ಆಗುತ್ತದೆ. ಇಂತಹ ವೇಳೆಯಲ್ಲಿ ಕುಡಿಯಲು ನೀರು ಇಲ್ಲ ಎಂದರೆ ಕಥೆ ಏನು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಹಿಂದೆ ವರ್ತಕರ ಸಂಘದಿಂದ ಕುಡಿಯುವ ನೀರಿಗಾಗಿ ಸಾರ್ವಜನಿಕರ ಸಮಸ್ಯೆ ಮನಗಂಡು R. O. Plant ಉಚಿತವಾಗಿ ನೀಡಲಾಗಿತ್ತು. ಹಾಗಾಗಿ ಸಾರ್ವಜನಿಕರಿಗೆ ಕುಡಿಯಲು ನೀರಿನ ವ್ಯವಸ್ಥೆ ಕೂಡ ಇತ್ತು. ಈಗ  R. O. Plant ಇದೆಯೇ ಹೊರತು ನೀರಿನ ವ್ಯವಸ್ಥೆ ಬಂದ್ ಮಾಡಲಾಗಿದೆ.  ಅದಕ್ಕೆ ಕಾರಣವೇನು ಎಂಬುದಾಗಿ ಸಾರ್ವಜನಿಕರು ಪ್ರೆಶ್ನೆ ಮಾಡುತ್ತಿದ್ದಾರೆ.

ಸಂಬಂಧಪಟ್ಟ ತಾಲೂಕು ಇಲಾಖೆ ಅಧಿಕಾರಿಗಳು ಸರಿಪಡಿಸುತ್ತಾರಾ ? ಕಾದು ನೋಡಬೇಕಿದೆ.







Previous Post Next Post