ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಪುನರಾರಂಭ
ತೀರ್ಥಹಳ್ಳಿ : ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಮರವೊಂದು ರಸ್ತೆಗೆ ಅಡ್ಡ ಬಿದ್ದ ಪರಿಣಾಮ ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಕಳೆದ ಎರಡು ಗಂಟೆಗಳಿಂದ ಮರವನ್ನು ತೆರವು ಮಾಡುವಲ್ಲಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಫಲರಾಗಿದ್ದಾರೆ.
ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದಿತ್ತು. ಬೆಳಗ್ಗೆ ಸಮಯ ಆಗಿದ್ದ ಕಾರಣ ತಕ್ಷಣ ಯಾವುದೇ ಅಧಿಕಾರಿಗಳಿಗೆ ಕರೆ ಸಂಪರ್ಕಿಸಲು ಆಗದ ಹಿನ್ನಲೆಯಲ್ಲಿ ಮರ ತೆರವಿನ ಕಾರ್ಯ ತಡವಾಯಿತು. ಅತೀ ಹೆಚ್ಚು ವಾಹನ ಓಡಾಟ ನಡೆಸುವ ತೀರ್ಥಹಳ್ಳಿ- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯಲ್ಲಿ ಈಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ತಿಳಿಸಿದ್ದಾರೆ..
Tags:
ಆಗುಂಬೆ ಸುದ್ದಿ