ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ ಪಿಎಸ್ಐ ಶಿವನಗೌಡ ಪಾಟೀಲ್ Agumbe

ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ ಪಿಎಸ್ಐ ಶಿವನಗೌಡ ಪಾಟೀಲ್

ತೀರ್ಥಹಳ್ಳಿ : ಮಲೆನಾಡ ಮಡಿಲಲ್ಲಿ ಇತ್ತೀಚಿನ ದಿನಗಳಲ್ಲಿ ದಂಧೆ, ಮಾಫಿಯಗಳೇ ಹೆಚ್ಚಾಗಿವೆ. ಅದರಲ್ಲೂ ಮಣ್ಣು, ಮರಳು, ಕಲ್ಲು ಈ ಮೂರು ದಂಧೆಗಳು ಎಗ್ಗಿಲ್ಲದೇ ನಡೆಯುತ್ತಿದೆ. ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದರು ಕೇಳುವವರೆ ಇಲ್ಲದಂತಾಗಿದೆ. ಇಂತಹ ಭ್ರಷ್ಟ ಅಧಿಕಾರಿಗಳ ನಡುವೆ ತಾಲೂಕಿನ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ದಾರೆ.

ತೀರ್ಥಹಳ್ಳಿಯಿಂದ ಆಗುಂಬೆ ಪೋಲಿಸ್ ಠಾಣೆಗೆ ವರ್ಗಾವಣೆ ಆಗಿದ್ದ ಪಿಎಸ್ಐ ಶಿವನಗೌಡ ಪಾಟೀಲ್ ಅವರು ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ಬಿದ್ದಿದ್ದಾರೆ. 
ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಾರೆ. ಈ ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ಬಿದ್ದ ಆಗುಂಬೆ ಪೋಲಿಸರ ತಂಡ ಇತ್ತೀಚೆಗೆ ಎಂಟು ದಂಡ ಪ್ರಕರಣಗಳು ಮತ್ತು ಒಂದು FIR ಅನ್ನು ದಾಖಲಿಸಿ ಮರಳು ತುಂಬಿದ 4 ಪಿಕಪ್ ವಾಹನವನ್ನು ಠಾಣೆಗೆ ತಂದು ನಿಲ್ಲಿಸಿದ್ದಾರೆ. ದಂಧೆಕೋರರಿಗೆ ಶಿವನಗೌಡ ಪಾಟೀಲ್ ಶಿವ ತಾಂಡವ ಆಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಮರಳು ಮಾಫಿಯ ನಡೆಸುವ ಕೆಲವು ದಂಧೆಕೋರರನ್ನು ಬಂಧಿಸಿದರೆ  ಕೆಲವು ರಾಜಕಾರಣಿಗಳು ಠಾಣೆಗೆ ಕರೆ ಮಾಡಿ ದೊಡ್ಡಮಟ್ಟದ ಒತ್ತಡ ಹಾಕಿ ಬಿಡಿಸಿಕೊಂಡು ಹೋಗಲು ಮುಂದಾಗುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.  ಹಾಗೇನಾದರೂ ರಾಜಕಾರಣಿಗಳು ಇಂತಹ ಅಕ್ರಮವಾಗಿ ಮರಳು ಮಾಫಿಯ ನಡೆಸುವವರ ಪರವಾಗಿ ನಿಂತರೆ ಅಂತಹ ರಾಜಕಾರಣಿಗಳ ಮೇಲು ಕೇಸ್ ದಾಖಲಿಸಬೇಕೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ...

ಇತ್ತೀಚೆಗೆ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲೂರು, ಕಮ್ಮರಡಿ, ಮಾಲತಿ ನದಿ ತೀರ, ಆಗುಂಬೆ, ಕೇಳೂರು,, ಬಾಗೋಡು ಸೇರಿ ಹಲವು ಹಳ್ಳ ಕೊಳ್ಳ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದವು. ಈಗ ಎಷ್ಟೋ ದಂಧೆಗೆ ಬ್ರೇಕ್ ಹಾಕಿರುವ ಶಿವನಗೌಡ ಪಾಟೀಲ್ ಅವರು ದಂಧೆಕೋರರಿಗೆ ಸರಿಯಾದ ಶಿಕ್ಷೆ ಆಗುವಂತೆ ಮಾಡಬೇಕು ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ...







Previous Post Next Post