ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಹಣ ವಸೂಲಿ ಮಾಡಿ ಅತೀ ದೊಡ್ಡ ವಾಹನ ಓಡಾಟಕ್ಕೆ ಅನುಮತಿ..!? Agumbe chek post

ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಹಣ ವಸೂಲಿ ಮಾಡಿ ಅತೀ ದೊಡ್ಡ ವಾಹನ ಓಡಾಟಕ್ಕೆ ಅನುಮತಿ..!?

ಜಿಲ್ಲಾಧಿಕಾರಿಗಳ ಆದೇಶಕ್ಕೂ ಕಿಮ್ಮತ್ತಿಲ್ವಾ.!? ವಸೂಲಿ ಮಾಡುವ ಹಣ ಯಾರ ಪಾಲು..!?

ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ ಅತೀ ದೊಡ್ಡ ವಾಹನಗಳಿಗೆ ಅನುಮತಿ ಇಲ್ಲದೆ ಇದ್ದರೂ ಸಹ ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಹಣ ವಸೂಲಿ ಮಾಡಿ ಅತೀ ದೊಡ್ಡ ವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ. ವಸೂಲಿ ಮಾಡುವ ಹಣ ಯಾರ ಜೇಬಿಗೆ ಹೋಗುತ್ತದೆ ಎಂಬುದು ಈಗ ಯಕ್ಷ ಪ್ರೆಶ್ನೆ ಆಗಿದೆ.

ಸರಿ ಸುಮಾರು 19 ರಿಂದ 20 ಅಡಿ ಉದ್ದದ ಈಚರ್ ಗಾಡಿಗಳನ್ನು ರಾತ್ರಿಯ ವೇಳೆ ಹಣ ಪಡೆದುಕೊಂಡು ಆಗುಂಬೆ ಘಾಟಿಯಲ್ಲಿ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಚೆಕ್ ಪೋಸ್ಟ್ ನಲ್ಲಿದ್ದವರನ್ನು ವಿಚಾರಿಸಿದರೆ ನಮಗೇನು ಗೊತ್ತಿಲ್ಲ, ದಿನ ಹೋಗುತ್ತಿವೆ ಎಂಬ ಸಾಬೂಬು ಉತ್ತರ ಹೇಳುತ್ತಿದ್ದಾರೆ. ಸಿಸಿಟಿವಿ ತೋರಿಸಿ ಎಂದರೆ ಸಿಸಿಟಿವಿ ಹಾಳಾಗಿದೆ, ಫಾರೆಸ್ಟ್ ಅಧಿಕಾರಿಗಳು ಬರಬೇಕು ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಒಂದು ಲಾರಿಗೆ ಒಂದು ಸಾವಿರಕ್ಕೂ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು
ಈ ಹಣ ಯಾರ ಜೇಬಿಗೆ ಹೋಗುತ್ತದೆ ಎಂಬುದು ತಿಳಿಯಬೇಕಿದೆ.ಹಾಗೆಯೇ ಸಣ್ಣ ಗಾಡಿಗಳಾದ ಬಾಳೆಕಾಯಿ, ತರಕಾರಿ, ಜಲ್ಲಿ, ಮೀನು, ಕೋಳಿ ಗಾಡಿಗಳಿಗೆ ಸಣ್ಣ ಪುಟ್ಟ ಗೂಡ್ಸ್ ಗಳಿಗೆ ನೂರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.  ವಾಹನಗಳಲ್ಲಿ ಏನಿದೆ ಎಂಬುದನ್ನು ಪರಿಶೀಲಿಸದೆ ಹಣ ತೆಗೆದುಕೊಂಡು ವಾಹನ ಬಿಡುತ್ತಿದ್ದಾರೆ ಎಂಬ ದೂರು ವಾಹನ ಚಾಲಕರಿಂದಲೇ ಕೇಳಿ ಬಂದಿದೆ.  ಜಿಲ್ಲಾಧಿಕಾರಿಗಳ ಆದೇಶ ಇದ್ದರು ಸಹ ಹಣ ವಸೂಲಿ ಮಾಡಿ ಘನ ( ಅತೀ ದೊಡ್ಡ)  ವಾಹನ ಓಡಾಟಕ್ಕೆ ಅನುಮತಿ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ಆಗುತ್ತದೆ ಕಾದು ನೋಡಬೇಕಿದೆ..







Previous Post Next Post