ಕುರುವಳ್ಳಿ ಬೈಪಾಸ್ ನಲ್ಲಿ ವಿದ್ಯುತ್ ಇಲ್ಲದೆ ಇರುವುದಕ್ಕೆ ಹುಣಸವಳ್ಳಿ ಕ್ವಾರೆ ಪಿಕಪ್ ಗಳ ಕೈವಾಡ..!?
ತೀರ್ಥಹಳ್ಳಿ : ಕುರುವಳ್ಳಿಯ ಬೈಪಾಸ್ ನಲ್ಲಿ ಸಂಪೂರ್ಣ ಕತ್ತಲಮಯ ಆಗಿರುವುದನ್ನು ಕಂಡು ಇತ್ತೀಚಿಗೆ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಕುರುವಳ್ಳಿ ನಾಗರಾಜ್ ಮಾತನಾಡಿ ವಿದ್ಯುತ್ ದೀಪ ಉರಿಯುವಂತೆ ಮಾಡಿದ್ದರು. ಆದರೆ ಈಗ ಮತ್ತೊಂದು ಸಮಸ್ಯೆ ಆಗಿದೆ. ರಾತ್ರಿ 11 ಗಂಟೆಯವರೆಗೆ ಇರುವ ಲೈಟ್ ಆನಂತರ ಸಂಪೂರ್ಣ ಕತ್ತಲಾಗುತ್ತದೆ. ಇದರ ಹಿಂದೆ ಮರಳು ಮಾಫಿಯ ಕೈವಾಡ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು ಕುರುವಳ್ಳಿ ಬೈಪಾಸ್ ನಲ್ಲಿ ಪ್ರತಿನಿತ್ಯ ನೂರಾರು ಮಂದಿ ವಾಕಿಂಗ್ ಮಾಡುತ್ತಾರೆ. ಆದರೆ ರಾತ್ರಿ 11 ಗಂಟೆಯವರೆಗೆ ವಿದ್ಯುತ್ ದೀಪಗಳು ಉರಿಯುತ್ತ ಇರುತ್ತವೆ. ಆ ನಂತರ ಸಂಪೂರ್ಣ ಕತ್ತಲಾಗುತ್ತದೆ. ಬೆಳಗಿನ ಜಾವಾ ವಾಕಿಂಗ್ ಮಾಡುವವರು ಕತ್ತಲಲ್ಲಿ ಓಡಾಟ ಮಾಡಬೇಕಿದೆ. ಇದಕ್ಕೆ ಕಾರಣ ಹುಣಸವಳ್ಳಿಯಿಂದ ಹೋಗುವ ಮರಳು ಪಿಕಪ್ ಎನ್ನಲಾಗುತ್ತಿದೆ.
ಪ್ರತಿನಿತ್ಯ 25 ಕ್ಕೂ ಹೆಚ್ಚು ಪಿಕಪ್ ಗಳು ಹುಣಸವಳ್ಳಿ ಕ್ವಾರೆಯಿಂದ ಹೊಡೆದ ಟ್ರಂಚ್ ಮುಚ್ಚಿ ಮರಳು ತುಂಬಿಸಿಕೊಂಡು ಹೋಗುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಮರಳು ಹೋಗುವ ಸಂದರ್ಭದಲ್ಲಿ ಬೈಪಾಸ್ ರಸ್ತೆಯಲ್ಲಿ ವಿದ್ಯುತ್ ದೀಪ ಆರಿಸಿ ಪಿಕಪ್ ನಲ್ಲಿ ಮರಳು ಹೊಡೆಯಲಾಗುತ್ತಿದೆ. ಇದರಿಂದ ಬೆಳಗಿನ ಜಾವಾ ವಾಕಿಂಗ್ ಮಾಡುವವರಿಗೆ ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಬೇಕಿದೆ..
Tags:
ತೀರ್ಥಹಳ್ಳಿ ಸುದ್ದಿ