ಸತ್ತ ಮೇಲೂ ಬಿಡದ ದ್ವೇಷ: ಸಂಕೇತ್ ಸಮಾಧಿ ಧ್ವಂಸಗೊಳಿಸಿದ ದುಷ್ಕರ್ಮಿಗಳು Shivamogga

ಸತ್ತ ಮೇಲೂ ಬಿಡದ ದ್ವೇಷ: ಸಂಕೇತ್ ಸಮಾಧಿ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಶಿವಮೊಗ್ಗ: ಫೆಬ್ರವರಿ 23ರಂದು ಅನ್ಯಕೋಮಿನ ಬಾಲಕರಿಂದ ಹತ್ಯೆಯಾಗಿದ್ದ ಸಂಕೇತ್ ಸಮಾಧಿಯನ್ನು ದುಷ್ಟರು ಧ್ವಂಸಗೊಳಿಸಿದ್ದಾರೆ. ಸಂಕೇತ್ ಅಂತ್ಯಕ್ರಿಯೆಯನ್ನು ಊರಗಡೂರಿನ ಗುಡ್ಡೇಮರಡಿ ದೇವಸ್ಥಾನದ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ನಡೆಸಲಾಗಿತ್ತು. ಪೋಷಕರು ಮಗ ಸಂಕೇತ್ ಫೋಟೋ ಹಾಕಿ ಚಿಕ್ಕದಾದ ಸಮಾಧಿಯನ್ನು ನಿರ್ಮಿಸಿದ್ದರು.

ಇದೀಗ ಸಂಕೇತ್ ಭಾವಚಿತ್ರವುಳ್ಳ ಗ್ರೈನೆಟ್ ಕಲ್ಲನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಕುಟುಂಬಸ್ಥರು ಪ್ರತಿ ಬುಧವಾರ ಸ್ಮಶಾನಕ್ಕೆ ತೆರಳಿ ಸಂಕೇತ್ ಸಮಾಧಿಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದರು. ಇದೀಗ ಮಗನ ಸಮಾಧಿ ಧ್ವಂಸಗೊಳಿಸಿರುವ ಸುದ್ದಿ ಕೇಳಿ ಸಂಕೇತ್ ಕುಟುಂಬ ಆಘಾತಕ್ಕೊಳಗಾಗಿದೆ. ಸಮಾಧಿ ಧ್ವಂಸ ಸಂಬಂಧ ಸಂಕೇತ್ ತಂದೆ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂಕೇತ್ ತಂದೆ ಹೇಳಿದ್ದೇನು?

ನನ್ನ ಮಗ ಸತ್ತ ಮೇಲು ಸಮಾಧಿಯನ್ನು ಬಿಡಲಿಲ್ಲ ಹಾಳು ಮಾಡಿದ್ದಾರೆ. ನಮ್ಮ ಮೇಲೆ ದ್ವೇಷವಿದ್ದರೆ ನಮಗೆ ಏನಾದರೂ ಮಾಡಿಬಿಡಿ. ನಮ್ಮ ಮನೆಯಲ್ಲಿ ಈ ಘಟನೆ ಸಂಭವಿಸಿದ ಬೆನ್ನಲ್ಲೇ ಯಾರೂ ಸರಿಯಾಗಿ ಊಟ ಕೂಡ ಮಾಡುತ್ತಿಲ್ಲ . ಬುಧುವಾರ ಹೂವಿನ ಹಾರ ಎಲ್ಲ ತೆಗೆದುಕೊಂಡು ಸಮಾಧಿಗೆ ಪೂಜೆ ಮಾಡಬೇಕು ಎಂದು ಕೊಂಡಿದ್ದೇವು. ಬಾಲಕನ ಫೋಟೋ ಇದ್ದ ಸಮಾಧಿಯ ಒಂದು ಭಾಗವನ್ನು ಒಡೆದು ಹಾಕಿದ್ದು, ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಸಂಕೇತ್ ತಂದೆ ಕುಮಾರ್ ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ ಏನು?

ಫೆಬ್ರವರಿ 23ರಂದು ರಾತ್ರಿ ಕ್ಲಾಸ್ ಮುಗಿಸಿಕೊಂಡು ಬರುವಾಗ ಸಂಕೇತ್ ಕೊಲೆಯಾಗಿತ್ತು. ಅನ್ಯಕೋಮಿನ ಬಾಲಕರು ಸಂಕೇತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾಗಿದ್ದ ಸಂಕೇತ್ ಸಾವನ್ನಪ್ಪಿದ್ದ. ಈ ಘಟನೆ ಬಳಿಕ ಶಿವಮೊಗ್ಗ ನಗರದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ರಾತ್ರಿಯಾದ್ರೆ ಮನೆಯಿಂದ ಹೊರಗೆ ಬರಲು ಭಯವಾಗುತ್ತೆ ಎಂದು ಸ್ಥಳೀಯರು ಆರೋಪಿಸಿದ್ದರು.





Previous Post Next Post