ಗುಡ್ಡೆಕೇರಿ ಬಳಿ ಹಿಟ್ & ರನ್ - ಸ್ಥಳದಲ್ಲೇ ವ್ಯಕ್ತಿಯೋರ್ವ ಸಾ*ವು
ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ ಆಗುಂಬೆ ಮಾರ್ಗ ಮಧ್ಯೆಯ ಕೌರಿಹಕ್ಲು ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊರ್ವನನ್ನು i 10 ಕಾರೊಂದು ಡಿಕ್ಕಿ ಹೊಡೆದು ಗಾಡಿ ನಿಲ್ಲಿಸದೆ ಹೋಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೊರಬ ಮೂಲದ ಗ್ರಾಂಡ್ ಐ 10 ಕಾರು ಗುದ್ದಿದ ಪರಿಣಾಮ ದಯಾನಂದ ಪ್ರಭು (60 ವರ್ಷ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಮುಂಭಾಗ ಜಖಂಗೊಂಡಿದೆ.
ಈಗಾಗಲೇ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದು ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
Tags:
ಅಪಘಾತ ಸುದ್ದಿ