ತೀರ್ಥಹಳ್ಳಿ ಬೈಪಾಸ್ ನಲ್ಲಿ ಅಪಘಾತ - ಓರ್ವನ ಸ್ಥಿತಿ ಗಂಭೀರ..! tth

ತೀರ್ಥಹಳ್ಳಿ ಬೈಪಾಸ್ ನಲ್ಲಿ ಅಪಘಾತ - ಓರ್ವನ ಸ್ಥಿತಿ ಗಂಭೀರ..!

ತೀರ್ಥಹಳ್ಳಿ : ಕುರುವಳ್ಳಿ ಬೈಪಾಸ್ ಬಳಿ ಕಾರು ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು ಓರ್ವರ ಸ್ಥಿತಿ ಗಂಭೀರವಾಗಿ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ..

ಕೋಣಂದೂರು ಮೂಲದ ಮಾರುತಿ ಸುಜುಕಿ ಕಾರಿಗೆ ಮೇಳಿಗೆ ಮೂಲದ ಪುಂಡರಿಕ ಭಟ್ ಎನ್ನುವವರ ಸ್ಕೂಟಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಸ್ಕೂಟಿ ಅತೀ ವೇಗದಲ್ಲಿ ಇತ್ತು ಎನ್ನಲಾಗುತ್ತಿದೆ. ಸ್ಕೂಟಿಯಲ್ಲಿದ್ದವರಿಗೆ ಗಂಭೀರವಾಗಿ ಪೆಟ್ಟಾಗಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಅಲ್ಲಿಂದ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಾರಿನ ಹಿಂಭಾಗದ ಗ್ಲಾಸ್ ಹಾಗೂ ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ..ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ..





Previous Post Next Post