ಅಡಿಕೆ ಸಿಡಿದು ಮಹಿಳೆಯೊಬ್ಬರಿಗೆ ಗಾಯ..!? ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ ಏನು?
ತೀರ್ಥಹಳ್ಳಿ : ಹಂದಿ ಶಿಕಾರಿ ಮಾಡಲು ಇಟ್ಟಿದ್ದ ಸಿಡಿಯುವ ವಸ್ತುವೊಂದು ಸಿಡಿದು ಮಹಿಳೆಯೊಬ್ಬರ ಕೈ ನ ಐದು ಬೆರಳುಗಳು ಸಂಪೂರ್ಣ ಹಾನಿಗೊಂಡ ಘಟನೆ ನೆಂಟೂರು ಬಳಿ ನಡೆದಿದೆ.
ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ನೆಂಟೂರಿನ ಕಮಲಮ್ಮ (72 ವರ್ಷ) ಗಾಯಗೊಂಡ ಮಹಿಳೆ. ತೋಟದಲ್ಲಿ ಹಂದಿ ಶಿಕಾರಿ ಮಾಡಲು ಗೋಟು ಅಡಿಕೆ ಒಳಗೆ ಕಚ್ಚಾ ಬಾಂಬ್ ಇಡಲಾಗಿತ್ತು. ಅದನ್ನು ನಾಯಿ ಕಚ್ಚಿಕೊಂಡು ಮನೆಯ ಅಂಗಳಕ್ಕೆ ತಂದಿದೆ. ಅದನ್ನು ಮುಟ್ಟಿದ ಕಮಲಮ್ಮ ಅವರಿಗೆ ಅಡಿಕೆ ಸಿಡಿದಿದ್ದು ಕೈ ಸಂಪೂರ್ಣ ಸುಟ್ಟು ಗಾಯವಾಗಿದೆ.
ಊರಿನ ಗ್ರಾಮಸ್ಥರು ಬಾಂಬ್ ಸಿಡಿದು ಎಂದು ತಿಳಿಸಿದ್ದು ಆದರೆ ಕುಟುಂಬಸ್ಥರು ಅಡಿಕೆ ಸಿಡಿದು ಗಾಯವಾಗಿದೆ ಎನ್ನುತ್ತಿದ್ದಾರೆ. ಅಡಿಕೆ ಸಿಡಿಯುತ್ತಾ? ಅಡಿಕೆಯೊಳಗೆ ಏನಿತ್ತು? ಎಂಬ ಪ್ರೆಶ್ನೆ ಉದ್ಭವಾಗಿತ್ತು. ಈಗ ಪೊಲೀಸ್ ಮಾಹಿತಿಯಂತೆ ಗೋಟು ಅಡಿಕೆ ಒಳಗೆ ಕಚ್ಚಾ ಬಾಂಬ್ ಇಟ್ಟು ಹಂದಿ ಶಿಕಾರಿ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಅದರಿಂದ ಇಂತಹ ಅವಘಡ ಆಗಿದೆ ಎಂಬುದಾಗಿ ತಿಳಿಸಿದ್ದಾರೆ.
ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Tags:
ಆಗುಂಬೆ ಸುದ್ದಿ