ಹಿರಿಯ ಕೃಷಿಕರಾದ ಹುಗಲವಳ್ಳಿ ಚಿನ್ನೇಗೌಡರು ಇನ್ನಿಲ್ಲ..! tth

ಹಿರಿಯ ಕೃಷಿಕರಾದ ಹುಗಲವಳ್ಳಿ ಚಿನ್ನೇಗೌಡರು ಇನ್ನಿಲ್ಲ..!

ತೀರ್ಥಹಳ್ಳಿ:  ಓಕ್ಕಲಿಗ ಸಮಾಜದ  ಹಿರಿಯರು, ಹಿರಿಯ ಕೃಷಿಕರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ ಗೌಡರ ಮಾವ  ಹುಗಲವಳ್ಳಿ ಚಿನ್ನೇಗೌಡರು ವಯೋಸಹಜ ಕಾರಣಗಳಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಹಾಗೂ ಹೊದಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಚಿನ್ನೇಗೌಡರು ಸರಿಸುಮಾರು 95 ವರ್ಷಗಳ ಸಾರ್ಥಕ ಜೀವನ ನಡೆಸಿದ್ದಾರೆ. ಅವರಿಗೆ ನಾಲ್ಕು ಮಕ್ಕಳು (ಎರಡು ಗಂಡು, ಎರಡು ಹೆಣ್ಣು ಮಕ್ಕಳು) ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಆಗಲಿದ್ದಾರೆ..

ಅಂತ್ಯಸಂಸ್ಕಾರವನ್ನು ಇಂದು ಸಂಜೆ 4 ಗಂಟೆಗೆ ಹುಗಲವಳ್ಳಿಯಲ್ಲಿ ಕುಟುಂಬ ವರ್ಗದವರ ನಿರ್ಧಾರಂತೆ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ..
Previous Post Next Post