ಕಟ್ಟೆಹಕ್ಲು ಬಳಿ ಗೋ ಸಾಗಾಟ - ಮೂವರ ಬಂಧನ..! crime

ಕಟ್ಟೆಹಕ್ಲು ಬಳಿ ಗೋ ಸಾಗಾಟ - ಮೂವರ ಬಂಧನ..!

ತೀರ್ಥಹಳ್ಳಿ: ದಿನಾಂಕ: 25-01-2026 ರಂದು ಬೆಳಗಿನ ಜಾವ 03.00 ಗಂಟೆಯ ಸಮಯದಲ್ಲಿ ಕಟ್ಟೆಹಕ್ಕಲು ಗ್ರಾಮದ  ದೇವರಾಜ ಎಂ.ಎಸ್ ಬಿನ್ ಎಂ.ವಿ ಶ್ರೀನಿವಾಸ ಗೌಡರವರಿಗೆ ಸೇರಿದ ಸುಮಾರು 12,000/- ರೂ ಮೌಲ್ಯದ ಹಸುವನ್ನು ಕಾರಿನಲ್ಲಿ ವಧೆಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಕಳ್ಳತನ ನಡೆಸಿದ ಆರೋಪಿತರಾದ 1) ಮುಬಾರಕ್ ತಂದೆ ಖಾಜೀಮ್ ಸಾಬ್, 25 ವರ್ಷ, ಮುಸ್ಲಿಂ ಜನಾಂಗ, ವಾಸ 7 ನೇ ಕ್ರಾಸ್ ಆರ್.ಎಂ.ಎಲ್. ನಗರ, ಶಿವಮೊಗ್ಗ, 2) ಅಹ್ಮದ್ ಬೇಗ್ ತಂದೆ ಚಾಂದ್ ಪಾಷ, 25 ವರ್ಷ, ಮುಸ್ಲಿಂ ಜನಾಂಗ, ಫರ್ನಿಚರ್ ಕೆಲಸ, ವಾಸ ಟಿಪ್ಪುನಗರ 02 ನೇ ಕ್ರಾಸ್ ಎಡಭಾಗ, ಶಿವಮೊಗ್ಗ, 3) ಮುಕ್ರಮ ವುಲ್ಲಾ ತಂದೆ ಹಬೀಬುಲ್ಲಾ, 21 ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, ವಾಸ ಟಿಪ್ಪುನಗರ 2 ನೇ ಕ್ರಾಸ್ ಎಡಭಾಗ, ಶಿವಮೊಗ್ಗ, ಈ ಮೂವರು ಆರೋಪಿಗಳನ್ನು  ವಶಕ್ಕೆ ಪಡೆದುಕೊಂಡು ಆರೋಪಿತರಿಂದ ಕೃತ್ಯಕ್ಕೆ ಬಳಸಿದ  2,00,000/- ರೂ ಮೌಲ್ಯದ ರಿಡ್ಜ್ ಕಾರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಅರವಿಂದ ಕಲಗುಂಜಿ,  ಡಿವೈಎಸ್ ಪಿ ತೀರ್ಥಹಳ್ಳಿ ಉಪವಿಭಾಗ  ರವರ ಸೂಚನೆಯಂತೆ ಒಂದು ವಿಶೇಷ ತಂಡವನ್ನು ರಚಿಸಿ ಅದರಂತೆ ತೀರ್ಥಹಳ್ಳಿ ಪೊಲೀಸ್ ಠಾಣಾ ನಿರೀಕ್ಷಕರಾದ  ಶ್ರೀ ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿಗಳಾದ ಸಿ.ಹೆಚ್.ಸಿ. ಲಿಂಗೇಗೌಡ, ಕುಮಾರ್, ವಿಜಯ್, ಸಿಪಿಸಿ ವೀರೇಂದ್ರ, ಪ್ರಸಾದ್, ದೀಪಕ್, ಮಂಜುನಾಥ ಹಂಪಿಹೊಳಿ, ಮಂಜುನಾಥ ದೋಣಿಕಲ್, ಮೋಹನ, ವಿಜಯ ಕುಮಾರ್ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ವಿಶೇಷ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಗಿ, ಈ ಬಗ್ಗೆ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಆಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಆಧೀಕ್ಷಕರು ಅಭಿನಂದಿಸಿರುತ್ತಾರೆ.


Previous Post Next Post