ಟಿಎಂಎಇಎಸ್ ಆಯುರ್ವೇದ ವೈದ್ಯಕೀಯ ಕಾಲೇಜುಶಿಷ್ಯೋಪನಯನ, ನೂತನ ಕಟ್ಟಡದ ಉದ್ಘಾಟನೆ B Y Raghavendra

ಟಿಎಂಎಇಎಸ್ ಆಯುರ್ವೇದ ವೈದ್ಯಕೀಯ ಕಾಲೇಜು
ಶಿಷ್ಯೋಪನಯನ, ನೂತನ ಕಟ್ಟಡದ ಉದ್ಘಾಟನೆ
ಶಿವಮೊಗ್ಗ: ಟಿಎಂಎಇಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಫೆಬ್ರವರಿ 7ರಂದು ಬೆಳಗ್ಗೆ 10 ಗಂಟೆಗೆ ನಿದಿಗೆಯಲ್ಲಿರುವ ಕಾಲೇಜಿನ ಆವರಣದಲ್ಲಿ ಶಿಷ್ಯ ಸಂಸ್ಕಾರ (ಶಿಷ್ಯೋಪನಯನ), ಲೈಬ್ರರಿ, ವಿವಿಧ ವಿಭಾಗ ಮತ್ತು ಸೆಮಿನಾರ್ ಹಾಲ್‌ನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಘಟಿಕೋತ್ಸವ ಹಮ್ಮಿಕೊಳ್ಳಲಾಗಿತ್ತು.

ಟಿಎಂಎಇ ಸೊಸೈಟಿಯ ಅಧ್ಯಕ್ಷರು ಹಾಗೂ ಹರಪನಹಳ್ಳಿ ತಗ್ಗಿನಮಠದ ಪೀಠಾಧ್ಯಕ್ಷರಾದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಆಧುನಿಕ ಆಪರೇಷನ್ ಕೊಠಡಿ(ಓಟಿ), ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ವಿವಿಧ ವಿಭಾಗಗಳ ಕಟ್ಟಡ ಮತ್ತು ಲೈಬ್ರರಿಯನ್ನು ಉದ್ಘಾಟಿಸಿದರು. ಟಿಎಂಎಇ ಸೊಸೈಟಿಯ ಕಾರ್ಯದರ್ಶಿ ಡಾ.ಟಿ.ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದರು. 

ಮುದಗಲ್‌ನ ಕಲ್ಯಾಣ ಆಶ್ರಮದ ಪ್ರವಚನ ಯೋಗಿ ಶ್ರೀ ಮಹಾಂತ ಮಹಾ ಸ್ವಾಮೀಜಿ, ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ರಿಜಿಸ್ಟಾರ್ ಪ್ರೊ.ಆರ್. ತಿಮ್ಮರಾಯಪ್ಪ, ಆರ್‌ಜಿಯುಹೆಚ್‌ಎಸ್‌ನ ಸೆನೆಟ್ ಸದಸ್ಯ ಡಾ. ವೀರೇಶ್ ಕರಬಸಪ್ಪ ಹಂಚಿನಾಳ, ಲ್ಯಾಂಡ್ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಡಾ.ಟಿ.ಎಂ. ವಿಶ್ವನಾಥ್, ನಿವೃತ್ತ ಪ್ರಾಧ್ಯಾಪಕ, ಜಾನಪದ ತಜ್ಞ ಬಸವರಾಜ್ ನೆಲ್ಲೀಸರ, ಟಿಎಂಎಇಎಸ್ ಎಎಂಸಿ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ. ಹಿರೇಮಠ, ಪ್ರಾಂಶುಪಾಲರಾದ ರುದ್ರಾಂಬಿಕ ಬಿರಾದರ್, ಉಪ ಪ್ರಾಂಶುಪಾಲ ಡಾ. ಸದಾನಂದ ಜೋಷಿ ಪಾಲ್ಗೊಳ್ಳುವರು ಎಂದು ಆಡಳಿತಾಧಿಕಾರಿ ಜಿ.ಎ. ಹಿರೇಮಠ ಅವರು ತಿಳಿಸಿದ್ದಾರೆ.
Previous Post Next Post